ಗೋ.....ವಾ!
ಅಲ್ಲಿ ಇಲ್ಲದ್ದು ಇರಲಿಲ್ಲ. ಕೊಂಚ ಅತ್ತಿತ್ತ ಸರಿದರೂ ಆ ದಪ್ಪನೆಯ ಹಾಸಿಗೆ ಏರಿಳಿಯುತ್ತಿತ್ತು. ಸಮುದ್ರದಲ್ಲೇ ಇದ್ದೇನೋ ಅಂತ ಮಂಚದ ಕೆಳಗೆ ಕೈಯಾಡಿಸಿ ನೋಡಿಕೊಂಡೆ ! ಎದ್ದು ಟಿವಿ ಹಾಕಿದೆ, ಸರಿ ಹೋಗಲಿಲ್ಲ. ಬಾತ್‌ಟಬ್‌ನಲ್ಲಿ ಬಿದ್ದುಕೊಂಡು ಸ್ನಾನ ಮಾಡಿದ್ದು ಸರಿ ಅನಿಸಿರಲಿಲ್ಲ. ನಿಧಾನವಾಗಿ ದೊಡ್ಡ ಗಾಜಿನ ಬಾಗಿಲು ತೆರೆದು, ತೆಳ್ಳಗೆ ಬೆಳಕು ಹರಡಿದ್ದ ಬಾಲ್ಕನಿಗೆ ಹೋಗಿ ಸುಖಾಸೀನನಾದೆ. ಒಳಗಿನ ಎ.ಸಿ. ತಂಪಿಗಿಂತ ಆ ಹವೆಯೇ ಹಿತ ಅನ್ನಿಸಿತು. ಕಿವಿಗೆ ಐಪಾಡ್ ಸಿಕ್ಕಿಸಿಕೊಂಡು ಪದ್ಯಾಣದವರ ಯಕ್ಷಗಾನ ಪದ್ಯ ಕೇಳುತ್ತ ಅದೆಷ್ಟು ಹೊತ್ತು ಕುಳಿತೆನೋ, ರೂಂ ಬಾಯ್ ಹೊರಗಿಂದ ಒಂದೇ ಸಮನೆ ಬೆಲ್ ಒತ್ತುತ್ತಿದ್ದ.
ಹಿಂದಿನ ಸಂಜೆ ನಾಲ್ಕರ ಇಳಿಬಿಸಿಲು. ನಮ್ಮ ಮನೆಯ ಅಂಗಳದಲ್ಲೇ ವಿಮಾನ ಓಡೋಡಿ ನಿಂತಂತೆ ಅನ್ನಿಸಿತು. ಹೌದು ಅದೇ ಕಲ್ಲು, ಹುಲ್ಲು, ಗಿಡ, ವಾತಾವರಣವೂ ಅದೇ. ಷಟ್ಲ್ ಹತ್ತಿ ಕುಳಿತರೆ ನುಣ್ಣನೆಯ ರಸ್ತೆ. ಗೋವಾದ ಏರ್‌ಪೋರ್ಟ್‌ನಿಂದ ಸಾಲ್ಸೆಟ್‌ನ `ಕೋಲ್ವಾಬೀಚ್'ನಲ್ಲಿರುವ `ರಾಮಡಾ ರಿನಾಯ್‌ಸೆನ್ಸ್ ಬೀಚ್ ರೆಸಾರ್ಟ್'ಗೆ ಅರ್ಧ ಗಂಟೆಯ ಹಾದಿ. ಎತ್ತರೆತ್ತರದ ಕಮಾನು ಕಟ್ಟಡಗಳೊಂದಿಗೆ ಅದು ೨೩ ಎಕರೆಗಳಲ್ಲಿ ಹರಡಿಕೊಂಡಿದೆ . ಅಲ್ಲಿನ ಈಜುಕೊಳದ ಮಧ್ಯೆಯೂ ಪುಟ್ಟ ಹೆಂಡದಂಗಡಿ ! (ಬಹುಶಃ ನೀರು ಬೆರೆಸುವುದೇ ಬೇಡ ಅಂತಿರಬೇಕು . ಹಿನ್ನೆಲೆಯಲ್ಲಿ `ತಾರಕ್ಕ ಬಾಟಲಿಯಾ' ಹಾಡು !) ಅಲ್ಲಿಂದ ಐನೂರು ಮೀಟರು ಸಾಗಿದರೆ ಸಾಗರ . ಅಡಿಗರು ಅಂದಂತೆಯೇ -`ಮಬ್ಬು, ಕಾಮಾಲೆ ಕತ್ತಲು, ಬಂದು ಮೈಮೇಲೆ ಅಬ್ಬರಿಸಿ ಎದ್ದೆದ್ದು ಬಿದ್ದು ಬೊಬ್ಬಿರಿದಲೆವ ಕಾರ್ಮೋಡ/ ಕುಡಿದುಬಿಟ್ಟಿದೆ ಕಣೋ, ಕಡಲ ಪಡಖಾನೆಯಲಿ ನೊರೆಗರೆವ ವ್ಹಿಸ್ಕಿ ಸೋಡಾ! 

]'ಸಮುದ್ರ ಮಧ್ಯೆ ಬೋಟು ನಿಲ್ಲಿಸಿ, ದೂರದಲ್ಲಿ ಡಾಲ್ಫಿನ್‌ಗಳನ್ನು ತೋರಿಸಿ, ಯಾರು ಹಾರುತ್ತೀರಿ ಸಾಗರಕ್ಕೆ ಅಂತ ಪ್ರಶ್ನೆ ಕೇಳಿದರೆ ಮೊದಲು ಹೂಂ ಅನ್ನುವವರಿಗೆ ಜಂಘಾಬಲ ಗಟ್ಟಿಯೇ ಬೇಕು. ಆ ಗುಜರಾತಿನ ಹುಡುಗಿ ಶಿವಾನಿಗೆ ಎಂಥಾ ಹುಚ್ಚೋ ಏನೋ, ಲೈಫ್ ಜಾಕೆಟ್ ಕಟ್ಟಿಕೊಂಡು ಮೊದಲು ಧುಮುಕಿದ್ದು ಅವಳೇ. ನಂತರ ನಾವೆಲ್ಲ ಮೆಲ್ಲ ಬೋಟಿನ ಸೈಡಿಗೆ ಹೋಗಿ, ಕಾಲ ಬೆರಳಿಗೆ ಮೊದಲು ನೀರು ಸೋಕಿಸಿಕೊಂಡು ಮೇಲಕ್ಕೆತ್ತಿ, ಪುನಃ ಪಾದ ಮುಳುಗುವಷ್ಟು ಸೊಂಟ ಜಾರಿಸಿ, ಮತ್ತೆ ಮೇಲೆ ಬಂದು, `ತುಮ್ ಕೂದ್‌ನಾ ಚಾಹ್‌ತೇಹೋ?' ಅಂತ ಪಕ್ಕದವನಿಗೆ ಹೇಳಿ, ಲೈಫ್‌ಜಾಕೆಟ್‌ನ್ನು ಮತ್ತೆ ಬಿಚ್ಚಿ ಗಟ್ಟಿಯಾಗಿ ಕಟ್ಟಿಸಿಕೊಂಡು, ಬೆನ್ನು ಬೋಟಿಗೆ ತರಚಿಕೊಳ್ಳುವಂತೆ ...ದುಡುಂ.
ಸ್ಕಾರ್‍ಲೆಟ್‌ಳ ನಿಗೂಢ ಸಾವಿನ ಪ್ರಕರಣ ಪ್ರಪಂಚದಾದ್ಯಂತ ಅಲೆ ಎಬ್ಬಿಸಿದ ಮೇಲೂ ಗೋವಾಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖೆಯಲ್ಲಿ ಕಡಿಮೆಯೇನೂ ಆಗಿಲ್ಲವಂತೆ. ಎಲ್ಲೆಲ್ಲಿ ಹೋದರೂ ಅವರೇ. ರಸ್ತೆಗಳಲ್ಲಿ ಬೈಕ್ ಓಡಿಸುತ್ತಾ, ಸೈಕಲ್ ತುಳಿಯುತ್ತಾ, ತೀರಗಳಲ್ಲಿ ಮೈಬಿಚ್ಚಿ ಸೂರ್‍ಯಸ್ನಾನ ಮಾಡುತ್ತಾ, ಎಲ್ಲೆಲ್ಲೂ ಅವರ ಹಿಂಡು. 














೧೯೮೪ರಲ್ಲಿ ಸಿಸಿಲಿಯಾ ಎಂಬಾಕೆ , ತಾನು ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದವನ ಜತೆಗಿನ ವಿವಾಹವನ್ನು ತಿರಸ್ಕರಿಸಿ, ಪ್ರಸಿದ್ಧ ಟಿವಿ ನಿರೂಪಕನಾಗಿದ್ದ ಜಾಕ್ವೆಸ್ ಮಾರ್ಟಿನ್ ಎಂಬವನಿಗೆ ಉಂಗುರ ತೊಡಿಸಿದಳು. ೨೬ ವರ್ಷದ ಆಕೆ ಆಗ ೯ ತಿಂಗಳ ಗರ್ಭಿಣಿ ಮತ್ತು ಮಾರ್ಟಿನ್‌ಗೆ ಕೇವಲ ೫೨ ವರ್ಷ ! ಆ ಮದುವೆಯನ್ನು ನೆರವೇರಿಸಿಕೊಟ್ಟವನು ಪ್ಯಾರಿಸ್ ಬಳಿಯ ಆ ಪಟ್ಟಣದ ಮೇಯರ್ ಆಗಿದ್ದ ನಿಕೊಲಸ್. ಆಗಲೇ ಮದುವಯಾಗಿದ್ದ ಸರ್ಕೊಜಿ, ನಂತರ ಬಯಸಿದ್ದು ಅದೇ ಸಿಸಿಲಾಳನ್ನು ! ಹಾಗೆ ೯೬ರಲ್ಲಿ ಅವಳನ್ನು ಮದುವೆಯಾಗಿ ಒಬ್ಬ ಮಗನೂ ಜನಿಸಿದ.




