ಉತ್ತಿ ಬಿತ್ತಿದ್ದು
11 months ago
ಇದು ದ್ವಿಚಕ್ರ ನಗರ
ವೇಷ ಮರೆಸಿದವರಿಗೆ ಬಂಡಿ ಅನ್ನ
ಬಕಾಸುರರ ಸಾಕಿದವರಿಗಷ್ಟೇ ಅಭಯ.
ಕುಂಬಾರನ ಮನೆಯಲ್ಲಿ
ದೊಣ್ಣೆ ನಾಯಕರಿಗೇನು ಕೆಲಸ? ಗೊತ್ತಿಲ್ಲ
ಸದಾ ಹೊರಟು-ನಿಂತವರೇ ಎಲ್ಲ .
ಎಣ್ಣೆ ನೋಡುತ್ತ ಮೀನು ಕಚ್ಚಿ ಎಳೆವವರು
ಗುರುವಿಗಿದಿರು ಶಿಷ್ಯನನ್ನೇ ಹೆದೆಯೇರಿಸುವರು;
ಒಬ್ಬಳಿಗೆ ಐವರು ಹೆಚ್ಚಾಯಿತೆ ? ಇಲ್ಲ
ನೂರ ಐದಾದರೂ ಅಡ್ಡಿಯಿಲ್ಲ
ಕೃಷ್ಣನಂತೂ ಇತ್ತ ಬರುವುದಿಲ್ಲ .
© Blogger templates Psi by Ourblogtemplates.com 2008
Back to TOP
1 comments:
ಅದ್ಬುತ ಹೋಲಿಕೆ.ಸಿಂಪ್ಲಿ ಸೂಪರ್......
ನಗರ ಸ್ವರ ಸೆಂಚುರಿ ಆಗಲಿ
ಇಂತಿ
ಶರತ್.ಎ
Post a Comment