ಸಿಟಿ ಗೀತ
ಶಾಪಿಂಗ್ ಮಾಲ್‌ನ ಮುಂದೆ
ಮಿನಿ ಸ್ಕರ್ಟಿನ ಹಿಂದೆ
ಅಂಟಿಕೊಂಡ ಚ್ಯೂಯಿಂಗಮ್ಮು
ಎಳೆ ಎಳೆದಷ್ಟೂ
ರೇಶಿಮೆಯ ಎಳೆಯಂತೆ ಬರುವುದರ
ನೋಡುತ್ತ ಕಚಕಚ ಅಗಿಯುತ್ತ
'ಬಿಗ್ ಬಬಲ್' ಊದುತ್ತ
ಅವಳ ಕಣ್ಣಿನಲ್ಲೇ ತಿಂದರು.
***
ಆಕೆ ಎಳೆದ 'ಸೆಂಟರ್ ಫ್ರೆಶ್’ ಚ್ಯೂಯಿಂಗಮ್ಮು
'ಸೆಂಟರ್ ಶಾಕ್’ನಂತೆ ಕೈಗೆ, ಬ್ಯಾಗಿಗೆ, ಗೋಡೆಗೆ
ಕಾರಿಗೆ, ಬಸ್ಸಿಗೆ, ಎಲ್ಲರ ಮೈಗೆ
ನೋವಿನೆಳೆಯಂತೆ ಅಂಟಿ ಹಬ್ಬುತ್ತಿರಲು...
***
'ಅಗಿದಗಿದು ತಿನ್ನು’ ಅಂತ
ಅಮ್ಮ ಅಂದದ್ದು ನೆನಪಾಗಿ
ಕಣ್ಣ ಕೊನೆ ಒರೆಸಿದರೆ
ನಗರವೇ ಅಗಿಯುತ್ತಿತ್ತು ಜಗಿಯುತ್ತಿತ್ತು
ನುಂಗಲೂ ಆಗದೆ, ಉಗುಳಲೂ ಬಾರದೆ.
4 comments:
ಸಿಟಿ ಎಡಿಷನ್ ತುಂಬಾ ಚೆನ್ನಾಗಿ ಮ್ಯಾನೇಜ್ ಮಾಡ್ತಿರಾ. ಮಜವಾಗಿರತ್ತೆ ನಿಮ್ಮ ಪಾಡ್ದನಗಳು.
ಸುಧನ್ವ, ಕೊನೆಯ ಸಾಲುಗಳು " ಜಗಿಯುತ್ತಿತ್ತು ನುಂಗಲು ಆಗದೆ, ಉಗುಳಲೂ ಬಾರದೆ "ತುಂಬ ಹಿಡಿಸಿದವು.
ಇದೆ ರೀತಿ ಬರಿಯುತ್ತ ಇರು,ಓದೋದಿಕ್ಕಂತು ನಾವು ಇದ್ದೆ ಇದ್ದೇವೆ .
ಪೇಟೆಯ, ಪೇಟೆಯವರ ಪಾಡು ಸುಮ್ಮನೆ ಕಮೆಂಟು ಕುಟ್ಟಲು ಭಯವಾಗುವಷ್ಟು ಚನ್ನಾಗಿದೆ! ನಮ್ಮೆಲ್ಲರ ಪಾಡನ್ನ ನೀವು ಬರೆಯುತ್ತಿರೋದಕ್ಕೆ Thanks ಹೇಳಲೇ/ಬೇಡವೇ ಎಂಬುದೂ ತಿಳಿಯುತ್ತಿಲ್ಲ.
-ಅಲಕಾ
ಸುಧನ್ವರವರೇ ಸಿಟಿ ಲೇಟ್ ಎಡಿಷನ್ ಅಂತಾ ಟೈಟಲ್ ಕೊಡಿ! ನಿಮ್ಮ ಲೇಖನ ನಮ್ಮೂರು ತಲುಪೋದು ಬಹಳ ಲೇಟ್ ಆಗ್ತಾ ಇದೆ!
Post a Comment