ನಮ್ ಆಫೀಸಲ್ಲಿ ಹಂಗೇನಿಲ್ಲ ..!
ತಾವು ಕೆಲಸ ಮಾಡುವ ಕಚೇರಿಗಳ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸೆ ಮಾಡುವವರು ಬಹಳ ಕಡಿಮೆ. ಪ್ರತಿಯೊಬ್ಬರಿಗೂ ಏನಾದರೊಂದು ತಕರಾರು ಇದ್ದೇ ಇರುತ್ತದೆ. ಕ್ಯಾಂಟೀನ್, ಬಾಸ್‌ಗಳು, ಕೆಲಸದ ರೀತಿ, ಸಮಯ...ಹೀಗೆ ಯಾವುದಾದರೊಂದು ವಿಷಯದ ಬಗ್ಗೆ ದೂರುಗಳು ಇಲ್ಲದಿಲ್ಲ. ಹೀಗಾಗಿ ಪತ್ರಿಕಾಲಯದಲ್ಲೂ ಅವು ಇರಲೇಬೇಕಲ್ಲ!
ಕೆಲವರಿಗೆ ಕ್ಯಾಂಟೀನ್ನಲ್ಲಿ ತಿನ್ನೋದೆಂದರೆ ಬೋರು. ಹಾಗಂತ ತಿನ್ನುವಾಗಲೂ ತಮ್ಮದೇ ಸೀಟಿನಲ್ಲಿ ಕುಳಿತುಕೊಳ್ಳುವುದೆಂದರೆ ಅಲರ್ಜಿ. ತಿನ್ನುವುದಕ್ಕಾದರೂ ಒಂದು ಹೊಸ ಜಾಗ ಬೇಕಲ್ಲ ಅಂತ, ಯಾರು ಕೆಲಸ ಮುಗಿಸಿ ಹೋಗಿರುತ್ತಾರೋ ಅವರ ಆಸನದಲ್ಲಿ ವಿರಾಜಮಾನರಾಗುತ್ತಾರೆ. ಅಲ್ಲಿಗೆ ಎಲ್ಲರನ್ನೂ ಕಾ ಕಾ ಕಾ ಅಂತ ಕರೆದು ಹಂಚಿ ತಿಂದರೆ ಅವರಿಗೆ ಸ್ವರ್ಗ ಸುಖ. ಮರುದಿನ ಆ ಸೀಟಿನ ವ್ಯಕ್ತಿ ಬಂದರೆ, ತಿಂದವರು ಕೈ ಒರೆಸಿಕೊಂಡ ಗುರುತಂತೂ ಅಲ್ಲಿ ಇದ್ದೇ ಇರುತ್ತದೆ !
ಇದರಿಂದ ಬೇಸತ್ತ ಮಿಸ್ಟರ್ ಕ್ಲೀನ್ ಒಬ್ಬರು, ತಾವೆದ್ದು ಹೋಗುವ ಮೊದಲು, ತಮ್ಮ ಕಂಪ್ಯೂಟರ್ ಮಾನಿಟರ್‌ನ್ನೇ ನೋಟೀಸು ಫಲಕವನ್ನಾಗಿ ಮಾಡಿ ಹೋದ ಚೆಂದ ಇದು. 'ತಿಂಡಿಪೋತರಿಗೆ ಮನವಿ' ಎಂಬ ಶೀರ್ಷಿಕೆಯಲ್ಲಿ ನಾಲ್ಕು ಎಚ್ಚರಿಕೆಯ ಮಾತುಗಳನ್ನೂ ಬರೆದು ಹೋಗಿದ್ದಾರೆ. ತಿಂದು ಚಿತ್ರಾನ್ನ ಮಾಡುವವರನ್ನು ಅಲ್ಲಿ ಕಟು ಶಬ್ದಗಳಿಂದ ಎಚ್ಚರಿಸಲಾಗಿದೆ.
ಎಲ್ಲರೂ ಟಿಫಿನ್ ಬಾಕ್ಸ್, ಪ್ಲೇಟ್ ಸಮೇತ ಅದರೆದುರು ಬಂದು ಓದುತ್ತಿದ್ದ ಚೆಂದವನ್ನು, ಛೆ ನೀವೆಲ್ಲರೂ ನೋಡಬೇಕಿತ್ತು !
3 comments:
ಸುಧನ್ವ,
ಆ ಫೋಟೊ ಮೇಲೆ ಕ್ಲಿಕ್ಕಿಸಿದ್ರೆ ಅದು ಮಾತೇ ಆಡ್ತಿಲ್ಲ! ಫೋಟೊ ಈಗಿದ್ದ ಗಾತ್ರದಲ್ಲಿ ಮನವಿಯ ವಿವರಗಳು ಕಾಣ್ತಿಲ್ಲ. ಆ ಮನವಿಯನ್ನು ನನಗೆ ಅಗತ್ಯವಾಗಿ ಓದಬೇಕಿತ್ತು... ಸಹಾಯ ಮಾಡಿ!!!
-ಶ್ರೀಪ್ರಿಯೆ
ಹಾ ಹಾ... ಅಷ್ಟಕ್ಕೇ ಸೆನ್ಸಾರ್ ಮಾಡಲಾಗಿದೆ. -ಚಂ
Post a Comment