November 28, 2007

ತುಂಡು ಪದ್ಯಗಳು


ಸಾವು ಹತ್ತಿರ ಬಂದಾಗ

ಕೆಲವರಿಗೆ ತಿಳಿಯುತ್ತದಂತೆ.

ತಿಳಿದ ಬಳಿಕ ಸತ್ತರೆ

ಅದನ್ನು ಸತ್ತದ್ದು ಎನ್ನಬಹುದೆ?
-------------------------
ಸಾವಿಗೆ ಯಾವ ನಿಯಮಗಳೂ ಇಲ್ಲ .
ಬದುಕಿನಂತೆ.


ಸಾವಿನ ಸವಾರಿ ಬರುವುದು
ಕೋಣನ ಮೇಲೆಯೇ
ಹಾಗಾಗಿಯೇ ಹಲವರಿಗೆ ಗೊತ್ತಾಗುವುದಿಲ್ಲ.

-------------------------

ಸಾಯುವವನಿಗೂ ಇರುವ ಕೊನೆಯ ಆಸೆ
ಕೊಲ್ಲುವವನಿಗಿರುವುದಿಲ್ಲ

ಬದುಕುವವನಿಗೂ ಇರುವ ಕೊನೆಯ ಆಸೆ
ಬದುಕಿಸುವವನಿಗಿರುವುದಿಲ್ಲ.

ಕೊಲ್ಲುವವನು ಬದುಕಿಸುವವನು ಒಬ್ಬನೇ ಆಗುವುದು ಹೀಗೆ.


ಸತ್ರೆ-ಹೋಗ್ಲಿ ಬಿಡಿ ಅನ್ನೋಹಾಗೆ

ಹುಟ್ಟಿದ್ರೆ-ಬರ್‍ಲಿ ಬಿಡಿ ಅನ್ನೋ

ಜನಕ ಮಹಾರಾಜರೂ ಇದ್ದಾರಾ?
-------------------

ಸಾವಿನ ಬಗ್ಗೆ ಬರೆದಿಟ್ಟು ಸಾಯುವುದು

ಓದಿ ಸಾಯುವುದಕ್ಕಿಂತ ಒಳ್ಳೆಯದು !

1 comments:

ಸುಶಾಂತ್ ಬನಾರಿ March 22, 2008 at 5:00 AM  

ಬದುಕಿದ್ದಾಗ ಸಾವಿನ ಬಗ್ಗೆ
ಸತ್ತಾಗ..?
ಬದುಕಿದ್ದು ಹೀಗೆ..
ಏರಡರ ನಡುವೆ
ತಿಳಿದರೂ ತಿಳಿಯದ ಹಾಗೆ
ಸಾಗುವೆವು ನಾವು ಹೀಗೆ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP