January 19, 2008

ಯಲ್ಲಾಪುರದ ಹಳ್ಳಿಯಲ್ಲಿ ಹುಟ್ಟಿ , ಕವಿಭೂಮಿ ಧಾರವಾಡದಲ್ಲಿ ಬದುಕುತ್ತಿದ್ದ ರವೀಂದ್ರ ಮಾವಖಂಡ ಎಂಬ ಜವ್ವನಿಗ ,ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ಬರೆದಿರುವ ಈ ಸಾಲುಗಳು, ನಾವು ಮುಟ್ಟಿಮುಟ್ಟಿ ನೋಡಿಕೊಳ್ಳುವಂತಿವೆ ! ಓದಿ ಹೇಳಿ.


ಅವ್ವ ರೊಟ್ಟಿಗೆ

ಗೋಧಿ ಹಿಟ್ಟನು

ಮಿದ್ದುತ್ತಿರುವಷ್ಟೇ

ಸಹಜ ಸರಾಗದಲ್ಲಿ

ನಾದುತ್ತಿದೆ ಎಲ್ಲರ

ಈ ಚರ ಶಹರ

ನೀಚರ ಶಹರ

ಬಳಲುತ್ತಿದ್ದ ಬಾಳು

ಆಕಾರ ವಿಕಾರವಾದ

ವಿಷಾದ ಮರೆತು

ಬೇಯುತಿದೆ

ಈ ನಗರದ ಅಗೋಚರ

ಅಡುಗೆ ಕೋಣೆಗಳ

ನೂರಾರು ಕಾವಲಿಗಳಲ್ಲಿ

ಪಾಳಿಯಲ್ಲಿ ಧೂಳಿಯಲ್ಲಿ

ಎದ್ದು ಬಿದ್ದು ಅಲ್ಲಿ ಇಲ್ಲಿ.

2 comments:

dinesh January 29, 2008 at 3:49 AM  

ಸೂಪರ್ ಹೋಲಿಕೆ 'ನಗರ'ಮತ್ತು ಅವ್ವ ನಾದುವ ಹಿಟ್ಟು...ಆದರೆ ಹೋಲಿಕೆಯಲ್ಲಿನ 'ಭಾವ' ಯಾವುದು ನನಗೆ ಗೊತ್ತಾಗಿಲ್ಲ ?

venkat.bhats November 28, 2010 at 10:27 AM  

very nice. innodistu stanzagalu bekittu ishte mugidoyta?

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP