January 19, 2008

ಸಿಗರೇಟು ಸೇದುವ ಹುಡುಗರು

ಗಿಜಿಗಿಜಿ ಜಾತ್ರೆಯಂಗಡಿ ಕೊನೆಗೆ
ಮನೆಯ ತೋಟದ ಮೂಲೆಗೆ
ಹೈಸ್ಕೂಲ್ ಟಾಯ್ಲೆಟ್ ಹಿಂದೆ

ಕಳ್ಳ ಕಿಸೆಯಲಿ ಮುರಿದ ಸಿಗರೇಟಿಗೆ
ಕಡ್ಡಿ ತೂರಿಸಿ ನೇರವಾಗಿಸಿ
ಕಣ್ಮುಚ್ಚಿ ಕೊಂಚ ಹೊಗೆ ಒಳಗೆಳೆದು
ಬೂದಿ ಹೊಡೆವಾಗ ಸಿಗರೇಟೇ ಕೈಜಾರಿ
ಮತ್ತೆರಡು ಕಡ್ಡಿ ಗೀರಿ ಕೆಮ್ಮುತ್ತ ...
ಆಹಾ ದಂ ಮಾರೋ ದಂ ದಂ .

ಛೆ, ಇನ್ನೆರಡು ಜಾಸ್ತಿ ತಗೋಬಹುದಿತ್ತು
ಇಲ್ಲ ಅಭ್ಯಾಸವಾದರೆ ಕಷ್ಟ !
ಮಾರ್‍ಲ್‌ಬರೋಗೆ ಅರುವತ್ತು ರೂಪಾಯಿ
ಚೈನ್ ಸ್ಮೋಕರ್ ಶಾರುಕ್ ಎಂಥ ಸಿಪಾಯಿ
ಅಂತೆಲ್ಲ ಗಿಲೀಟು ಮಾತಾಡುತ್ತ ಎಳೆಯುತ್ತ
ಸಿಗರೇಟು ಸೇದೋರೆಲ್ಲ ಕೆಟ್ಟೋರಾ ಅಂತ ವೇದಾಂತ
ಶಿವರಾಜ್ ಕುಮಾರ್ ಸಿನಿಮಾದಲ್ಲಿ ‘ಸಂತ ’ !

ರಜನಿ ಸ್ಟೈಲ್ ಗೊತ್ತಾ, ಫ್ರೆಂಚ್ ಇನ್‌ಹೇಲರ್ ಬರತ್ತಾ?
ಹೊಗೆಯಲ್ಲೇ ಲವ್ ಸಿಂಬಲ್ ಆ...ಆ...ವ್...ವ್...
ಉಫ್...ಹಿಂಗೆ ಮಾಡೋಕಾಗತ್ತ,
ಹನೀಫನ ಅಂಗಡೀಲಿ ಲೈಟ್ಸ್ ಸಿಗತ್ತಾ?

ಕಾಲೇಜಿಗೋದ್ರೆ ಇದು ಕಾಮನ್ನು , ಫ್ಯಾಷನ್ನು
ಬೇಕಾದ್ರೆ ತಗೋ ನಿನ್ನ ಡವ್ವಿನ ಪರ್ಮಿಷನ್ನು !
ಎನ್ನುತ್ತ ಹೊಗೆ ಕಾರುತ್ತ ಹೈ-ಸ್ಕೂಲು ಹುಡುಗರು ...

ಅಪ್ಪ ಆಷ್‌ಟ್ರೇನಲ್ಲಿ ಸಿಗರೇಟು ಮುರಿದರು
ಮೇಷ್ಟ್ರು ಹುಡುಗರ ಬೆನ್ನು ಮುರಿದರು .
ಮೊನ್ನೆ ಅಪ್ಪನ ತಿಥಿಗೆ ಊರಿಗೆ ಹೋಗಿದ್ದಾಗ ,
ಬೆನ್ನಿಗೆ ಎಣ್ಣೆ ಹಚ್ಚಿ ಅಮ್ಮ ತಿಕ್ಕುತ್ತಿದ್ದಾಗ ,
ಇವೆಲ್ಲ ಯಾಕೋ ನೆನಪಾಯಿತು .

-ಸುಧನ್ವಾ
(ಕವಿ-ಕತೆಗಾರ ಶ್ರೀಕೃಷ್ಣ ಆಲನಹಳ್ಳಿ, ಫೋಟೊ:ಯಜ್ಞ)


3 comments:

Anonymous,  January 23, 2008 at 11:26 AM  

ಸಿಗರೇಟು ಸೇದುವ ಹುಡುಗರು, ಮದ್ಯಸಾರ ಹೀರುವ ಹುಡುಗರು(ಅಪಾರ), ಮೋಟುಗೋಡೆ ಇಣುಕುವ ಹುಡುಗರು....ಥೂ..ಥೂ... ಕಾಲ ಕೆಟ್ಟೋಯ್ತು!! ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪಾ ...ಅಲ್ವೇನೇ ಗಂಗೂ?? :)

ನನ್ನವಳ ಲೋಕ,,, August 1, 2011 at 3:13 AM  

Alanahalli Chaluavraju

is good Kavan i lika Krishna Sir

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP