ದ್ವಾ ಸುಪರ್ಣಾ- ಕೊನೆಯ ಭಾಗ
ಮನೆಯ ಅಂಗಳದ ಮೂಲೆಯ ಚೆರ್ರಿ ಮರದಲ್ಲಿ
ನಾನು ನೋಡುವಾಗಲೆಲ್ಲ
(ಲೆಕ್ಕವಿಲ್ಲದಷ್ಟು ಸಲ)
ಕೂತಿರುತ್ತವೆ ಎರಡು ಹಕ್ಕಿಗಳು. ಕಪ್ಪು ಕಪ್ಪಗೆ !
ನೀವು ಕೇಳಿರುವ ಉಪನಿಷತ್ತಿನ
'ದ್ವಾ ಸುಪರ್ಣಾ’ (ಸಯುಜಾ ಸಖಾಯ)
ಹಕ್ಕಿಗಳ ಹಾಗಲ್ಲ ಇವು
ಎರಡು ಅಕ್ಷರಶಃ ಸುಮ್ಮನೇ ಕೂತಿವೆ.
ನನಗೇಕೋ ಸಾವನ್ನು ಸ್ವಾಗತಿಸಲೆಂಬಂತೆ
ಕಾಣುತ್ತಿವೆ.
ರಾಶಿ ರಾಶಿ ಚೆರ್ರಿ ಹಣ್ಣಿವೆ, ಎಲೆಗಳ ಅಡಿಯಲ್ಲಿ
ಹಕ್ಕಿ ಕಣ್ಣಿನಂತೆ ಹೊಳೆಯುತ್ತವೆ.
ಇವು ನೋಡುವುದೇ ಇಲ್ಲ ಆ ಕಡೆ
ಬಹುಶಃ ಈ ಜೋಡಿ ಹಣ್ಣು ತಿಂದು
ಸುಸ್ತಾಗಿವೆ.
ಅಥವಾ ಹಸಿವೆಯನ್ನೇ ಮರೆತಂತಿವೆ.
ಇಂದೇ ಮರದ ಒಂದೇ ಗೆಲ್ಲಿನಲ್ಲಿ
ಎರಡು ಹಕ್ಕಿಗಳು ಹೀಗೆ
ಹತ್ತಿರ ಹತ್ತಿರ ಕೂತಿವೆ-ಅಷ್ಟೆ.
-ಸಂಧ್ಯಾದೇವಿ
('ಬೆಂಕಿ ಬೆರಳು-ಮಾತು ಚಿಟ್ಟೆ-ಮುರಿದ ಮುಳ್ಳಿನಂತೆ ಜ್ಞಾನ' ಸಂಕಲನದಿಂದ)

ಒಂದು ಹಣ್ಣ ತಿನ್ನುತ್ತ ಇನ್ನೊಂದು ಸುಮ್ಮನೆ ನೋಡುತ್ತ ಕುಳಿತಿರುವ ಉಪನಿಷತ್ತಿನ ಜೋಡಿ ಹಕ್ಕಿಗಳು-
ಸಾವನ್ನು ಸ್ವಾಗತಿಸಲೋ ಎಂಬಂತೆ ಸುಮ್ಮನೆ ಹತ್ತಿರ ಹತ್ತಿರ ಕೂತಿರುವ ಹಕ್ಕಿಗಳು-
'ಇದು ಅದೇ’ ಎಂಬಂತೆ ಅದ್ವೈತದಲ್ಲಿ ಕುಳಿತಿರುವ ಚೊಕ್ಕಾಡಿಯ ಹಕ್ಕಿಗಳು-
ಹಣ್ಣ ತಿನ್ನುವ, ಇನ್ನೊಂದು ತಾನೇ ಹಣ್ಣಾಗುವ ಸುರೇಶರ ಹಕ್ಕಿಗಳು-
ರಾಮಾನುಜನ್‌ರಿಗೆ ಪಕ್ಕದ ಮನೆ ಸಂಸಾರದಂತೆ ಕಾಣುವ ಹಕ್ಕಿಗಳು-
ಪ್ರಣಯದಾಟದಲ್ಲಿ ನಿರತವಾಗಿದ್ದಾಗಲೇ ಬೇಡನ ಬಾಣಕ್ಕೆ ತುತ್ತಾಗಿ ವಾಲ್ಮೀಕಿಯ ರಾಮಾಯಣಕ್ಕೆ ಪ್ರೇರಣೆಯಾದ ಕ್ರೌಂಚ ಪಕ್ಷಿಗಳು !
ಇದು ಎಲ್ಲ ಪ್ರಾಣಪಕ್ಷಿಗಳ ಕತೆಯಲ್ವೆ?ಸಾವನ್ನು ಸ್ವಾಗತಿಸಲೋ ಎಂಬಂತೆ ಸುಮ್ಮನೆ ಹತ್ತಿರ ಹತ್ತಿರ ಕೂತಿರುವ ಹಕ್ಕಿಗಳು-
'ಇದು ಅದೇ’ ಎಂಬಂತೆ ಅದ್ವೈತದಲ್ಲಿ ಕುಳಿತಿರುವ ಚೊಕ್ಕಾಡಿಯ ಹಕ್ಕಿಗಳು-
ಹಣ್ಣ ತಿನ್ನುವ, ಇನ್ನೊಂದು ತಾನೇ ಹಣ್ಣಾಗುವ ಸುರೇಶರ ಹಕ್ಕಿಗಳು-
ರಾಮಾನುಜನ್‌ರಿಗೆ ಪಕ್ಕದ ಮನೆ ಸಂಸಾರದಂತೆ ಕಾಣುವ ಹಕ್ಕಿಗಳು-
ಪ್ರಣಯದಾಟದಲ್ಲಿ ನಿರತವಾಗಿದ್ದಾಗಲೇ ಬೇಡನ ಬಾಣಕ್ಕೆ ತುತ್ತಾಗಿ ವಾಲ್ಮೀಕಿಯ ರಾಮಾಯಣಕ್ಕೆ ಪ್ರೇರಣೆಯಾದ ಕ್ರೌಂಚ ಪಕ್ಷಿಗಳು !
4 comments:
ಉಪನಿಷತ್ತಿನ ಜೋಡಿ ಹಕ್ಕಿಗಳು ಕನ್ನಡದಲ್ಲಿಯೇ ಇಷ್ಟೊಂದು ಕವನಗಳಿಗೆ ಸ್ಪೂರ್ತಿ ನೀಡಿವೆಯಾದರೆ, ಇನ್ನೂ ಬೇರೆ ಬೇರೆ ಭಾಷೆಗಳಲ್ಲಿ ಎಷ್ಟಿವೆಯೋ! ಹಕ್ಕಿಯ ಹಾಡಿಗೆ ನಿಮ್ಮೊಡನೆ ನಮ್ಮನ್ನೂ ತಲೆದೂಗುವಂತೆ ಮಾಡಿದಿರಿ. ಧನ್ಯವಾದಗಳು.
ಯಾಕ್ರೀ ಇಲ್ಲಿದ್ದ ಸಿಲ್ಲಿ ಪದ್ಯ ತೆಗೆದುಹಾಕಿದ್ದೀರಿ? ಚೆನ್ನಾಗಿತ್ತು. :)
raatri post maadidde. belaggege bahala silly annistu.
entha avsthe !
ಅದ್ಯಾವುದು ಸಿಲ್ಲಿ ಪದ್ಯ? ಓದಬೇಕು ಅಂತ ಆಸೆ ಆಗಿದೆ.
ಎರಡು ಹಕ್ಕಿ!!!!
ನಮಗೆ ಒಂದು ಸಾಕು ;)
ತಿನ್ನುತ್ತಿರುವ ಹಕ್ಕಿಯನ್ನು ಪರಮಾತ್ಮನೆಂದು ನೋಡುತ್ತಿರುವವನನ್ನು ಜೀವಾತ್ಮನೆಂದುಕೊಂಡರೆ? ಪರಮಾತ್ಮ ಉಂಡು ಕುಳಿತಿರುವ ಇವನಿಗೆ ಅನುಭವ ನೀಡುತ್ತಾನೆ. ಪರಮಾತ್ಮ ಸುಮ್ಮನೆ ನೋಡುತ್ತ ಯಾಕೆ ಕುಳಿತಿರಬೇಕು, ನಿಷ್ಕ್ರಿಯನಾಗಿ?
Post a Comment