December 03, 2007

ಹೊರಟಾಗ

ಮಿನುಗುತ್ತಿದ್ದ ಅಮ್ಮನ ಮುಖ
ಇದ್ದಕ್ಕಿದ್ದಂತೆ ಆರಿಸಿದ ದೀಪ.
ಕಣ್ಣುಗಳು ಬಾಡಿ, ಗಂಟಲ ಸೆರೆ ಉಬ್ಬಿ
'ಛೇ, ಇವತ್ತು ಗಿಡಕ್ಕೆ ನೀರೇ ಹಾಕಿಲ್ಲ’
ಎಂಬ ವಿಷಯಾಂತರ ಯತ್ನದಲ್ಲಿ
ಅಪ್ಪ ಬಂದು ಅಮ್ಮನ ಸ್ವರದಲ್ಲಿ ಮಾತಾಡುತ್ತಾರೆ
ಕಂಪಿಸುತ್ತದೆ ಅವಳ ಧ್ವನಿ.
ಕೊನೇ ಕ್ಷಣದಲ್ಲಿ ಮತ್ತೊಂದಷ್ಟು ಕೆಲಸಗಳ ನೆನಪಿಸಿಕೊಂಡು
'ಹಾಗಿದ್ರೆ ಪೈಪ್ ಹಾಕೋ ಕೆಲ್ಸ, ಸ್ಕೂಟರ್ ರಿಪೇರಿ ಮಾಡಿಸ್ತೇವೆ,
ಹೊಸ ಡ್ರಮ್, ಒಂದು ಫೈಬರ್ ಚಯರ್ ತಗೊಳ್ತೇವೆ’ ಕ್ಷಣ ತಡೆದು
'ಮತ್ತೆ ಎಂತದ್ದಕ್ಕೂ ಮುಂದಿನ ತಿಂಗಳು ಬರ್ತೀಯಲ್ಲ’
ಎಂದು ಒಳ ನಡೆಯುತ್ತಾಳೆ, ಕತ್ತಲಲ್ಲಿ ಕೈ ಬೀಸುತ್ತೇನೆ.

ಅಂಗನವಾಡಿಗೆ, ಶಾಲೆಗೆ ಹೊರಟಾಗ-ಇದೇ ಅಮ್ಮ
ಉಲ್ಲಾಸದ ಮೂಟೆ; ದೂರದ ಕಾಲೇಜಿಗೆ ಹೊರಟಾಗ ಕೊಂಚ ಮಂಕು
ಅಪ್ಪನೇ ಹೊರಟುಹೋದಾಗ ನಾಲ್ಕು ದಿನಗಳ ಸಂಕಟ
ಮತ್ತೆ ಒಳಗೊಳಗೆ ಬೇಯುತ್ತ ಬಸಿವ ಬೆವರು, ದೇವರು ದಿಂಡರು.

ಅವಳು ಯಾವತ್ತೂ ಎಲ್ಲಿಗೂ ಹೊರಡುವುದಿಲ್ಲ
ಬಾ ಎಂದರೂ ಇಲ್ಲ, ಹೋಗೆಂದರೂ ಇಲ್ಲ
ಕಾರಣವಿಷ್ಟೆ- ಅವಳು ಹೊರಟಾಗ
ಕಳುಹಿಸಿಕೊಡಲು ಯಾರೂ ಇರುವುದಿಲ್ಲ.

10 comments:

ಸಿಂಧು sindhu December 4, 2007 at 1:21 AM  

ಅಮ್ಮ ಮತ್ತು ವಿಷಯಾಂತರದ ಕ್ಷಣಗಳನ್ನ, ಕಾರಣವೇ ಇಲ್ಲದೆ ಭಾರವಾಗುವುದನ್ನ, ಬದುಕಿನ ಎಲ್ಲ ಒಜ್ಜೆ ಹೊತ್ತೂ ಹಾಗೇ ಹಗುರಾಗಿ ನಿಲ್ಲುವುದನ್ನ..
ತುಂಬ ಚೆನಾಗಿ ಬರ್ದಿದೀರಿ. ಇಷ್ಟ ಆಯ್ತು.

ಪ್ರೀತಿಯಿಂದ
ಸಿಂಧು

ವಿಕ್ರಮ ಹತ್ವಾರ December 4, 2007 at 6:59 AM  

ನನ್ನ ಎಲ್ಲ ತಾಯಂದಿರನ್ನ ನೆನಪಿಸಿದಿರಿ.

Anonymous,  December 4, 2007 at 2:59 PM  

'ಅವಳು ಹೊರಟಾಗ
ಕಳುಹಿಸಿಕೊಡಲು ಯಾರೂ ಇರುವುದಿಲ್ಲ'

ಬೇಡ ಎಂದರೂ ಈ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತವೆ.
ಕವನ ಚೆನ್ನಾಗಿದೆ ರೀ.

-ಅಲಕಾ

Anonymous,  December 4, 2007 at 9:19 PM  

sindhu, vikram, alaka,
thanks for your comments.
-sudhanva

Anonymous,  December 10, 2007 at 11:04 PM  

Super aagide sudhanva..koneya saalugalanthu matte matte odisutta ide

regatds
Sharath.A

Anonymous,  December 10, 2007 at 11:12 PM  

konegoo mouna muridaddakke thanx !

VENU VINOD December 11, 2007 at 5:47 AM  

ಮನಮುಟ್ಟುವ ಸಾಲುಗಳು...ಅನೇಕರು ಹೇಳಿದಂತೆ
'ಅವಳು ಹೊರಟಾಗ
ಕಳುಹಿಸಿಕೊಡಲು ಯಾರೂ ಇರುವುದಿಲ್ಲ'
ಈ ಸಾಲುಗಳೇ ಸಾಕು ಎಲ್ಲವನ್ನೂ ಹೇಳಲು..

Archu January 26, 2008 at 6:34 AM  

sudhanva,
tumbaa chennagi barediddeeri..manamuttida kavana..
archana

Anonymous,  February 2, 2010 at 3:02 AM  

Summane iddavaLige kaNNinalli neeru tarisiddakke nimma mele siTTu.

aadaru....thumba chennagide!

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP