ದಿಸ್ ಈಸ್ ನಾಟ್ ಎ ಹಿಡನ್ ಕ್ಯಾಮೆರಾ !
ಯಾವುದು ಪಟಾಕಿ ಸದ್ದು, ಯಾವುದು ಬಾಂಬಿನ ಸದ್ದು ಅಂತ ಗುರುತಿಸಲು ಈ ಬಾರಿ ನಮಗೆ ಸಾಧ್ಯವಾದೀತೆ?! ಪಟಾಕಿ ಸದ್ದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಬಾಂಬಿನ ನಿಜವಾದ ಸದ್ದನ್ನು ನಾವು ಬಹುತೇಕರು ಕೇಳಿಯೇ ಇಲ್ಲ. ನಮಗೆ ಗೊತ್ತಿರುವುದು, ಸಿನಿಮಾದಲ್ಲಿ ಕೇಳುವ ಅದರ ಸದ್ದು ಅಥವಾ ಅದು ಸಿಡಿದ ಮೇಲೆ ಛಿದ್ರ ಛಿದ್ರವಾದ ದೇಹಗಳ ದೃಶ್ಯ. ಕ್ಷಣ ಮಾತ್ರದಲ್ಲಿ ಗುಜರಿ ಅಂಗಡಿಯಂತಾಗುವ ಅತ್ಯಾಧುನಿಕ ಶಾಪ್‌ಗಳು. ಟಿವಿ ವಾಹಿನಿಗಳು ಪದೇಪದೆ ಬಿತ್ತರಿಸುವ ಆರ್ತನಾದ- ಕೆದರಿದ ಕೂದಲು- ಅಂದಗೆಟ್ಟ ಮುಖಗಳ ದೃಶ್ಯ...ಇಷ್ಟೇ. ಪಟಾಕಿಯ ಬತ್ತಿಗೆ ಊದಿನ ಕಡ್ಡಿಯಿಂದ ಬೆಂಕಿ ತಗುಲಿಸಿ, ಅಷ್ಟು ದೂರ ಓಡಿ, ಎರಡೂ ಕಿವಿಗಳನ್ನು ಎರಡೂ ತೋರುಬೆರಳುಗಳಿಂದ ಮುಚ್ಚಿಕೊಂಡು ನಿಂತಿದ್ದಾರೆ ಹುಡುಗರು ; ಅದು ಸಿಡಿಯಿತೋ..ಹುರ್ರೇ....ಎಂಥಾ ನಗೆ ಬಾಂಬು. ಹ್ಹಹ್ಹಹ್ಹ...ಹ್ಹೊಹ್ಹೊಹ್ಹೊ...ಹೇಹೇಹೇ...ಅಂತಹುದೊಂದು ದೃಶ್ಯವನ್ನು ಬಾಂಬ್ ಸ್ಫೋಟದ ಮೊದಲೋ, ನಂತರವೋ ಕಲ್ಪಿಸುವುದಕ್ಕಾದರೂ ಸಾಧ್ಯವೆ? 'ಸದ್ದು ಮಾಡದ ದೀಪಾವಳಿ' ಎನ್ನುವ ಶೀರ್ಷಿಕೆಯೊಂದು ಪತ್ರಿಕೆಗಳಲ್ಲಿ ಎಂದಾದರೂ ಬರುವುದುಂಟೆ?! ಈ ಬಾರಿಯ ದೀಪಾವಳಿಯಲ್ಲಿ ಪಟಾಕಿಗಳಷ್ಟೇ ಸಿಡಿಯಲಿ. ಆ ಸದ್ದು-ಬೆಳಕಿನಲ್ಲಿ ಕೆಟ್ಟದ್ದು ಕೇಳದಿರಲಿ, ಕಾಣದಿರಲಿ ಅಂತ ಆಸೆ ಪಡುತ್ತಿದ್ದೇನೆ.
***
'ವಿಜಯ ಕರ್ನಾಟಕ'ದ ಈ ಬಾರಿಯ ದೀಪಾವಳಿ ಸಂಚಿಕೆಯಲ್ಲಿ ಹಲವಾರು ಎಲೆಮರೆಯ ಪ್ರತಿಭೆಗಳು ಹೊರಬಂದಿವೆ ! ಮೇಕಿಂಗ್ ಆಫ್ ಸಂಚಿಕೆಯ ಸಂದರ್ಭದ ಕೆಲ ದೃಶ್ಯಗಳನ್ನು 'ಚಂಪಕಾವತಿ' ರಹಸ್ಯವಾಗಿ ಸೆರೆಹಿಡಿದಿದೆ. ಕೆಳಗಿನ ಫೋಟೊಗಳನ್ನು ನೋಡಿ. ಕುತೂಹಲವಾಯಿತೆ? ದೀಪಾವಳಿ ವಿಶೇಷ ಸಂಚಿಕೆ ಕೊಂಡು ಓದಿ, ನೋಡಿ, ಆನಂದಿಸಿ. ಥ್ಯಾಂಕ್ಸ್ ಟು ವಿಕ.
5 comments:
ನನ್ನ ಜ್ಯೂನಿಯರ್ ಪಠಾಕಿಗಾಗಿ ಕಾಯುತ್ತಿದ್ದಾನೆ. ನನಗೆ ಇಷ್ಟವಿಲ್ಲದಿದ್ದರೂ ಅವನಿಗಾಗಿ ತಂದು ಹುಷಾರಾಗಿ ಹೊಡಿಸಬೇಕಿದೆ ಕಣ್ರೀ!
photos are full of foolishness
ತು೦ಬ ಸು೦ದರವಾಗಿ ಬರೆಯುತ್ತೀರ ನೀವು. ನಾನು ಈ ಬ್ಲಾಗಿನ ರೆಗ್ಯುಲರ್ ಓದುಗ.
ನನ್ನ ಬ್ಲಾಗಿನ ಪ್ರೇರಣೆ ಈ ನಿಮ್ಮ ಬ್ಲಾಗು.
http://prasad-nirchal.blogspot.com/ ಗೆ ಒ೦ದು ಭೇಟಿ ನೀಡಿ.
ಸಲಹೆಗಳಿಗೆ ಸ್ವಾಗತ :)
ಸುಧನ್ವಾ,
ಪ್ರಜಾವಾಣಿ ವಿಶೇಷಾಂಕ ಓದಿದೆ. ಚೆನ್ನಾಗಿ ಮೂಡಿ ಬಂದಿದೆ. ಮೊದಲನೆಯ ಕಥೆ(ಯಾಹೂ ಚಾಟ್ ದು) ಮತ್ತು ಹುಲಿಸವಾರಿ ಇಷ್ಟವಾಯಿತು. ನಿಮಗೂ ನಿಮ್ಮ ತಂಡಕ್ಕೂ ಅಭಿನಂದನೆಗಳು
~ಮಧು
thanks to being anonymous ! -champakavati
Post a Comment