November 14, 2007

ಬ್ಲಾಗ್ ಧ್ಯೇಯಗೀತೆ

ಬ್ಲಾಗಲ್ ಬರಿಯೋದಂದ್ರೆ ಬಹಳ ಸುಲ್ಬದ್ ಕೆಲ್ಸ ಅನ್ಬೇಡಿ
ಬಾಗ್ಲಲ್ ಬಂದೂ ಬ್ಯಾಬ್ಯಾ ಅನ್ನೋರ್ ಮಾತು ಕೇಳ್ಲೇಬೇಡಿ

ಎಷ್ಟ್ ಬರೆದ್ರೂ ಮಾತಾಡಲ್ಲ ಕೆಲೋರು ಭಾರೀ 'ಟೈಟು’
ಕಾಲ್ ಕೆರ್‍ಕೊಂಡ್ ಜಗಳಕ್ಕೋದ್ರೂ ಸಿಕ್ಕಾಪಟ್ಟೆ ಸೈಲೆಂಟು!

ಹಗ್ಲು ರಾತ್ರಿ ಕುಟ್ಟಿದ್ರೂನು ಇಲ್ಲ ಸಂಬ್ಳ-ಪ್ರಶಸ್ತಿ
ಆಫೀಸ್ ಟೈಮಲ್ಲಿ ಬ್ಲಾಗ್ ಓದೋರ ಸಂಖ್ಯೆ ಬಹ್ಳ ಜಾಸ್ತಿ !
ಬ್ಲಾಗಿಂಗ್ ಅಂದ್ರೆ ಬರೀ ಹುಚ್ಚು ಬ್ಲಾಗರ್ ಅಂದ್ರೆ ಕೋಡು
ಹೇಳೋರಿಲ್ಲ ಕೇಳೋರಿಲ್ಲ ಓದೋರಿಲ್ಲ ಪಾಡು!

'ಅವ್ರಿವ್ರ್ ಬಗ್ಗೆ , ಲೋಕದ್ ಬಗ್ಗೆ ಹೇಳಿದ್ದೇ ಹೇಳ್ಕೊತಾನೆ
ಇವ್ನ ಜಂಭ, ಒಳಗಿನ್ ಬುರುಡೆ ಸುಮ್ನೆ ತೋರ್‌ಸ್ತಾನೆ'
ಅಂತಂದ್ಕೊಂಡೆ ನೋಡ್ಕೊಂಡ್ ಓದ್ಕಂಡ್ ಹೋಗ್ತಿರೋದು ನೀವೆ
ಬರ್‍ಕೊಂಡ್ ಬರ್‍ಕೊಂಡ್ ಚಚ್ಚಾಕ್ತಿರೋದು ಲೆಕ್ಕಕ್ಕಿಲ್ದ ನಾವೇ!

ಹೈಸ್ಕೂಲ್ ಹುಡ್ಗಿ ಕನ್ನಡಿ ಮುಂದೆ ಕೂತ್ಕಂಡಿರೋ ಹಂಗೆ
ಮಾನಿಟ್ರ್ ಮುಂದೆ ಕಣ್‌ಬಿಟ್ಕೊಂಡು 'ನೆಟ್ಟು’ ಬಿಚ್‌ಹಾಕೊಂಡು
ಬ್ಲಾಗಿನೊಳಗೆ ಪೇಪರ್‍ನೋರು ಎಲ್ಲಾ ಬಾಗ್ಲು ತಕ್ಕೊಂಡು
ಓದಿ ಓದಿ ಬರಿಯೋದೊಂದು ಎಲ್ರೂ ಓದೋವಂತದ್ದು
ಏನೂ ಓದ್ದೆ ಬರಿಯೋದೊಂದು ಯಾರೂ ಬರಿಯಾಕಾಗದ್ದು!

ಹಿಂಗೆ ಬರ್‍ಕೊಂಡ್ ಬರ್‍ಕೊಂಡ್ ಒಯ್ತಾ ಇದ್ರೆ ಏನಾಗುತ್ತೊ ಗೊತ್ತಿಲ್ಲ
ತಿಳಿಯೋವರ್‍ಗೆ, ನಿಮ್ ಅಮ್ಮನ್ ಆಣೆ, ಬರಿಯೋದಂತೂ ನಿಲ್ಸಲ್ಲ!

7 comments:

Krish November 16, 2007 at 10:32 AM  

Superb. ಹೌದು ಸುಧನ್ವ ಅವರೇ ಸರಿಯಾಗಿ ಪದ್ಯದ ರೂಪಿನಲ್ಲಿ ಗದ್ದಿಸಿದ್ದೀರಿ ( ಗುದ್ದಿಸಿದ್ದೀರಿ ). ಸಂಪಾದಕರು ನಮ್ಮ ಬರಹ ವನ್ನು ಕ .ಬು. ಗೆ ಹಾಕುತ್ತಾರೆ ಎಂಬೋ ಭಯ ಇಲ್ಲ ನೋಡಿ...... ಬ್ಲಾಗಿಸಿರಿ....ಬ್ಲಾಗಿಸುತ್ತಲೇ ಇರಿ ....

Jagali bhaagavata November 20, 2007 at 7:03 PM  

ಧ್ಯೇಯಗೀತೆ ಚೆನ್ನಾಗಿದೆ :-)

apara November 23, 2007 at 6:21 AM  

ಎಷ್ಟ್ ಬರೆದ್ರೂ ಮಾತಾಡಲ್ಲ ಕೆಲೋರು ಭಾರೀ 'ಟೈಟು’ annod matra correctu. geethe chennagide.
~apara

Anonymous,  November 23, 2007 at 9:09 PM  

heegoo aagatte-'esht kududroo maatadalla, keloru bharee tightu'

thanks to everybody
-sudhanva

v.v. November 26, 2007 at 9:53 PM  

ನಮಸ್ಕಾರ.

ನಿಮ್ಮ "ಬ್ಲಾಗ್ ಧ್ಯೇಯ ಗೀತೆ" ಮಜಾ ಕೊಟ್ಟಿತು.
"ಬರಿಯೋದಂತೂ ನಿಲ್ಸಲ್ಲ!" ಎಂಬ ಧೃಢ ಸಂಕಲ್ಪ ಎಲ್ಲ್ರ ಬ್ಲಾಗಿಗರಿಗೂ ಇರಲಿ!

ವಂದನೆಗಳೊಂದಿಗೆ,
ಶೇಷಾದ್ರಿ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP