೩೦೭, ೩೦೬ ಮತ್ತು ?
ನಾವು ಕೊಚ್ಚಿಕೊಂಡದ್ದೇ (ಹೊಗಳಿಕೊಂಡದ್ದೇ)ಬಂತು. ಕೊಚ್ಚಿಯಲ್ಲಿ ಕೊನೆಗೂ ಕೊಚ್ಚಿ ಹೋದದ್ದು ಇಂಡಿಯಾ. ಸೈಮಂಡ್ಸ್ ಮತ್ತು ಹ್ಯಾಡಿನ್‌ರಂತೂ ನಮ್ಮ ಬೌಲರುಗಳನ್ನು ಕೊಚ್ಚಿ ಹಾಕಿದರು.
ಟಾಸ್ ಹಾಕುವುದಕ್ಕೆ ಬಂದ ಆಸ್ಟ್ರೇಲಿಯಾ ತಂಡದ ನಾಯಕ ಗಿಲ್‌ಕ್ರಿಸ್ಟ್ ಐದು ನಿಮಿಷ ಕಾಯುವಂತೆ ಮಾಡಿದ ಧೋನಿ ೨೨೨ ರನ್‌ಗಳ ತನಕ ಗೂಟ ಕಾದದ್ದೇ ಬಂತು. ಗಂಗೂಲಿ ನಾಯಕರಾಗಿದ್ದಾಗ, ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾ ಟಾಸ್‌ಗಾಗಿ ಕಾಯುವಂತೆ ಮಾಡುತ್ತಿದ್ದರಂತೆ.
ಟಿವಿ ಚಾನೆಲ್ ಒಂದರ ಖಾಸಗಿ ಕಾರ್‍ಯಕ್ರಮಕ್ಕಾಗಿ ನಗರದಿಂದ ಸುಮಾರು ೩೪ಕಿಮೀ ದೂರ ಹೋದ ಧೋನಿಗೆ, ಪಂದ್ಯದ ಆರಂಭಕ್ಕೆ ಮೊದಲು ಪತ್ರಕರ್ತರ ಜತೆ ಮಾತಾಡುವುದಕ್ಕೂ ಸಮಯ ಸಿಗಲಿಲ್ಲ. ಪತ್ರಿಕಾಗೋಷ್ಠಿಗಾಗಿ ಕಾದಿದ್ದ ಪತ್ರಕರ್ತರೆಲ್ಲ ಮ್ಯಾನೇಜರ್ ಹೇಳಿದ್ದನ್ನೇ ಬರಕೊಳ್ಳಬೇಕಾಯಿತು. ಗಿಲ್‌ಕ್ರಿಸ್ಟ್ ಮಾತ್ರ ಉದಾಸೀನ ಮಾಡಲಿಲ್ಲ.
ಹಲವು ದಿನಗಳಿಂದ ಮಳೆ ಸುರಿದು ತೊಪ್ಪೆಯಾಗಿದ್ದ ಅಂಗಣವನ್ನು ಶ್ರಮಪಟ್ಟು ಸಿದ್ಧಗೊಳಿಸಿದವರು ಮುಖ್ಯ ಕ್ಯುರೇಟರ್ ಪಿ.ವಿ. ರಾಮಚಂದ್ರನ್. ಅಲ್ಲಿ ನೀರು ಹಿಂಡುವ ಕೂಲಿಯಾಳುಗಳ ಸಂಬಳ ದಿನಕ್ಕೆ ರೂ.೩೦೦. ಮುಖ್ಯ ಕ್ಯುರೇಟರ್‌ಗೂ ಸಿಕ್ಕಿದ್ದು ಅವರಿಗಿಂತ ಬರೀ ೧೦೦ರೂ. ಹೆಚ್ಚು ! ರಾಮಚಂದ್ರನ್ ಈಗ ಮುಖ ಹಿಂಡುತ್ತಿದ್ದಾರೆ.
ಟಾಸ್ ಗೆದ್ದ ಬಹಳಷ್ಟು ಪಂದ್ಯಗಳಲ್ಲಿ ಭಾರತ ಸೋಲುತ್ತಿದೆಯೇ ಎಂಬ ಪ್ರಶ್ನೆ ನನ್ನದು. ನೆಟ್‌ನಲ್ಲಿ ನಡೆಸಿದ ಅವಸರದ ಜಾಲಾಟದಲ್ಲಿ ಉತ್ತರ ಸಿಗಲಿಲ್ಲ. ಈ ಬಗ್ಗೆ ಯಾರಾದರೂ ಅಂಕಿಅಂಶಗಳನ್ನು ನೀಡುವಿರಾ?
೫ರಂದು ಸುಲ್ತಾನರ ನಗರಿ ಹೈದರಾಬಾದ್‌ನಲ್ಲಾದರೂ ನಾವು "ಏಕ್ ದಿನ್ ಕಾ ಸುಲ್ತಾನ್’ ಆಗಲೆಂದು ಹಾರೈಸೋಣ.
ಇಂಡ್ಯಾ ಇಂಡ್ಯಾ ಇಂಡ್ಯಾ...
2 comments:
ದಕ್ಷಿಣ ಕನ್ನಡ ಮತ್ತು ಯಕ್ಷಗಾನದ ಕುರಿತಾದ ಲೇಖನಗಳು ಇಷ್ಟವಾದವು. ಯಕ್ಷಗಾನದ ಬಗ್ಗೆ ಇನ್ನಷ್ಟು ಬರೆಯಿರಿ.
ಅದೆಲ್ಲಾ ಇರ್ಲಿ... ಆ ಫೋಟೋ ಯಾರದು?????
Post a Comment