November 14, 2010

ಸೂರಿಯ ಪಂಚರಂಗಿ ! ಒಂದು ಟಿಪ್ಪಣಿ



ಇದು ಬಣ್ಣಗಳಲ್ಲಿ ಅದ್ದಿ ತೆಗೆದ ಸಿನಿಮಾ. ಪ್ರತಿ ಫ್ರೇಮಿಗೂ ಬಣ್ಣ, ನಾಯಕನ ಮನಸ್ಸಿಗೆ ಹಲವು ಬಣ್ಣ, ಕತೆಗೆ ಬಣ್ಣ, ಡಯಲಾಗುಗಳಿಗೆ ಬಣ್ಣ. ಹಾಗಂತ ಇದು ಕರಣ್ ಜೋಹರ್‌ನ ಬಿಳಿ-ಗುಲಾಬಿ ಬಣ್ಣಗಳೂ ಅಲ್ಲ. ಒಳ್ಳೆಯವನಿಗೆ ಒಳ್ಳೆಯದಾಗುತ್ತದೆ, ಕೆಟ್ಟವನಿಗೆ ಕೆಟ್ಟದಾಗುತ್ತದೆ ಎಂಬ ಬ್ಲ್ಯಾಕ್ ಅಂಡ್ ವೈಟ್‌ಗಂತೂ ಇಲ್ಲಿ ಜಾಗವಿಲ್ಲ. ಯಾಕೆಂದರೆ ಇದು ಸೂರಿ ದುನಿಯಾ.

ಇಲ್ಲಿ ಮಾತಿದೆ, ಹೊಡೆದಾಟ ಇದೆ, ಹಾಡಿದೆ, ಡ್ಯಾನ್ಸ್ ಇದೆ, ಕಣ್ತುಂಬುವ ದೃಶ್ಯಗಳಿವೆ. ಇವೆಲ್ಲ ಸೇರಿ ಕ್ಷಣಕಾಲ ನಮ್ಮನ್ನು ಅವಾಕ್ಕಾಗಿಸಿ ಮೌನಕ್ಕೆ ತಳ್ಳುವ ಶಕ್ತಿ ಇದೆ. ಸಿನಿಮಾದಲ್ಲಿ ಕತೆ ಇದೆಯಾ ಅಂತ ಹುಡುಕುವವರ ಮುಸುಡಿನ ಎದುರು ಹತ್ತು ಕತೆ ಬಿಚ್ಚಿಕೊಳ್ಳುತ್ತವೆ. ಪ್ರತಿಯೊಂದು ಫ್ರೇಮನ್ನೂ ಸೂರಿ ಸಮೃದ್ಧವಾಗಿಸೋದನ್ನು ನೋಡುವುದೇ ಚೆಂದ. ಎಲ್ಲವೂ ಕಣ್ತುಂಬಿಕೊಳ್ಳುತ್ತಾ, ನಮ್ಮ ಕಣ್ಣುಗಳಿಗೆ ಬಿಡುವೇ ಇಲ್ಲ.
ಸೂರಿ ಸಿನಿಮಾಗಳ ಹೀರೋಗಳೆಲ್ಲ ಹವಾಯಿ ಚಪ್ಪಲಿಯ ವೀರರೇ. ಒಣರೊಟ್ಟಿ ತಿಂದು ಗಟ್ಟಿಯಾದವರೇ. ಕೆಲಸ ಇಲ್ಲ, ಗೋತ್ರ ಇಲ್ಲ, ಮನೆ ಇಲ್ಲ, ಸಂಬಂಧಿಗಳು ಯಾರು ಗೊತ್ತಿಲ್ಲ, ಕೈಯಲ್ಲಿ ಕಾಸಿಲ್ಲ. ಆದರೂ ಇವೆಲ್ಲ ಇದ್ದವರನ್ನು ಅಲುಗಾಡಿಸಬಲ್ಲವರು.
ಇವರು ತಮ್ಮಲ್ಲಿ ಇದ್ದದ್ದನ್ನು ಇಲ್ಲದವರಿಗೆ ಕೊಡುತ್ತಾರೆ. ತಮ್ಮಲ್ಲಿ ಇಲ್ಲದ್ದನ್ನೂ ಇಲ್ಲದವರಿಗೆ ಕೊಡಿಸುತ್ತಾರೆ ! ಇಂಥವರು ಹೀರೋ ಅಲ್ಲದೆ ಮತ್ತಿನ್ನೇನು?!

ಚಿನ್ನದ ಬಣ್ಣಕ್ಕೂ ಮಣ್ಣಿನ ಬಣ್ಣಕ್ಕೂ ಅಂಥಾ ವ್ಯತ್ಯಾಸ ಇದೆಯಾ? ಹೊಳೆದರೆ ಚಿನ್ನ, ಹೊಳೆಯದಿದ್ದರೆ ಮಣ್ಣು. ಹಾಗಾಗಿಯೇ ಏನೋ, ಸೂರಿಗದು ಒಲವಿನ ಬಣ್ಣ. ಕೊಂಚ ಹಳದಿ, ಕೊಂಚ ಕಂದು. ಆ ಗೋಧಿ ಬಣ್ಣ ಮನುಷ್ಯನ ಮೈಬಣ್ಣವೂ ಹೌದಲ್ಲ.
ತುಂಬಿ ಬಂದ ಮನಸ್ಸನ್ನು ಅಕ್ಷರಗಳಲ್ಲಿ ತುಂಬಿ ಕಳಿಸುವುದಷ್ಟೇ ಈ ಟಿಪ್ಪಣಿಯ ಉದ್ದೇಶ. ಬಗೆದು ನೋಡಿದರೆ ಈ ಸಿನಿಮಾದಲ್ಲೂ ಸಾಕಷ್ಟು ಅರೆಕೊರೆಗಳು ಕಂಡಾವು. 'ದುನಿಯಾ’ವನ್ನು ಮೀರಿಸುವ ಸಿನಿಮಾ ಇದು ಅನ್ನುವಂತೆಯೂ ಇಲ್ಲ. ಒಳ್ಳೆಯ ಸಿನಿಮಾ ಮಾಡುವುದು ಎಷ್ಟು ಕಷ್ಟ ಎಂದು ಅರಿತಿರುವವರು, ಕನ್ನಡ ಸಿನಿಮಾದ ಗುಣಮಟ್ಟವನ್ನು ಗ್ರ್ರಹಿಸಿರುವವರು ’ಜಾಕಿ’ಯನ್ನು ಮನದುಂಬಿ ಅಭಿನಂದಿಸಬೇಕು.

4 comments:

Anonymous,  November 16, 2010 at 12:13 AM  

ಜಾಕಿ ಚಿತ್ರದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ 'ಚೆಲ್ಲಾಪಿಲ್ಲಿಯಾಗಿ ಬಿದ್ದ ಬಿಡಿ ಹೂಗಳು'

Anonymous,  November 16, 2010 at 12:34 AM  

waaah yes. u r right anonymous.
-sudhanva

Ragu Kattinakere January 4, 2011 at 9:13 AM  

Prabhakara Joshi on Yakshagana
http://www.youtube.com/watch?v=-IatkePjt1w

Anonymous,  May 2, 2011 at 8:37 AM  

nodida koneya chitra! life istene....!

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP