February 21, 2008

ಪೇಟೆ ಪದ್ಯ

8
ಬೆಳಗ್ಗೆ ಪೇಟೆಗೆ ಬಂದ,
ಸಿಗಲಿಲ್ಲ ಅಂತ ಪಟ್ಟಣ ಸೇರಿದ.
ಬೇಜಾರಾಗಿ ಮಧ್ಯಾಹ್ನದೂಟಕ್ಕೆ
ನಗರ ಪ್ರವೇಶಿಸಿ,
ಸಂಜೆ ಸುತ್ತಾಟದಲಿ ಸಿಗುವುದೆಂದು
ಮಹಾ ನಗರಿಗೆ ಬಂದ.
ರಾತ್ರಿ ದಿಕ್ಕು ತಪ್ಪಿ ಅಲೆಯುತ್ತಿದ್ದಾಗ
ಹಾ ಸಿಕ್ಕಿತು...ಬೇಕಾದ್ದೆಲ್ಲ ಸಿಕ್ಕಿತು...
ಊರ ಹಾದಿ ಮರೆತ.

ಅವನ ಮುದಿ ಅಮ್ಮ
ಪ್ಯಾಂಟು ತೊಳೆದಾಗ ಸಿಕ್ಕ ಎರಡು ರೂಪಾಯಿ ನೋಟನ್ನು
ಬೆಳಗಿನ ಬಿಸಿಲಲಿ ಜೋಪಾನ ಒಣಗಿಸುತ್ತಿದ್ದಳು.
ಎದ್ದು ಬಂದ, ನೋಡಿ ನಕ್ಕ !
9
ಇಲ್ಲಿ ಆಕಾಶ ಕಾಣಲ್ಲ ಗೊತ್ತು
ಅವಕಾಶಕ್ಕೆ ಕೊರತೆಯಿಲ್ಲ
ಇದ್ದರೆ ರಿಬೋಕ್, ಇಲ್ಲದಿದ್ದರೆ ಹವಾಯಿ
ತಲೆಯೆತ್ತಿ ನಡೆಯಬಹುದು ತಲೆ ಮರೆಸಿಕೊಳ್ಳಲೂಬಹುದು !
ಹಾದರಕ್ಕೆ ಆದರಕ್ಕೆ
ಕೃತಜ್ಞತೆಗೆ ಕೃತಘ್ನತೆಗೆ
ಇಲ್ಲಿ ಅಂಥ ವ್ಯತ್ಯಾಸವಿಲ್ಲ
ನುಡಿದಂತೆ ನಡೆವ, ಹುಸಿ ಗೌರವದ ಭಾರವಿಲ್ಲ !

ಬಡವರು ಬೆಳೆದು ದೊಡ್ಡವರಾಗಬಹುದು
ಪ್ರೀತಿಸಿದವರು ದ್ವೇಷವಿಲ್ಲದೆ ಬದುಕಬಹುದು
ಇಲ್ಲಿ ಎಲ್ಲವೂ ವಾಚ್ಯ , ಪರವಾಗಿಲ್ಲ ,
ಊರಲ್ಲಿ ಅವಾಚ್ಯ.

3 comments:

Anonymous,  February 21, 2008 at 10:31 PM  

ಸುಧನ್ವ,
ಸಾಗಲಿ ಪಾಡ್ದನ. Keep it up! ಇಲ್ಲಿ ಇನ್ನೂ ಸಿಕ್ಕಾಬಟ್ಟೆ ಇಮೇಜು, ಸಂಕೇತಗಳಿಗೆ ಅವಕಾಶವಿದೆ. ಹಾಗಿರೋದು ನಿಮ್ಮ ಸಾಲುಗಳಿಂದ ಬಹಳಷ್ಟು ನಿರೀಕ್ಷಿಸುವ ಆಸೆ ಹುಟ್ಟಿಸುತ್ತವೆ. ಕಾಯುವ ಹಾಗೆ ಮಾಡುತ್ತಿವೆ. ಹಮ್ ಮಾಂಗೇ ಮೋರ್!!
-ಟೀನಾ.

Anonymous,  February 22, 2008 at 4:02 PM  

ಇವನ್ನು ಓದುತ್ತಿದ್ದರೆ ನಿಮ್ಮಿಂದ ಇವು ಲೀಲಾಜಾಲವಾಗಿ ಹೊರಹೊಮ್ಮಿದಂತೆ ಅನ್ನಿಸುತ್ತೆ. ಟೀನಾ ಹೇಳಿದಂತೆ ಸಾಗಿಯೇ ಬಿಡಲಿ; ’ಪೇಟೆ ಪುರಾಣ’ವೇ ಆಗಲಿ.

"ಅವನ ಮುದಿ ಅಮ್ಮ
ಪ್ಯಾಂಟು ತೊಳೆದಾಗ ಸಿಕ್ಕ ಎರಡು ರೂಪಾಯಿ ನೋಟನ್ನು
ಬೆಳಗಿನ ಬಿಸಿಲಲಿ ಜೋಪಾನ ಒಣಗಿಸುತ್ತಿದ್ದಳು.
ಎದ್ದು ಬಂದ, ನೋಡಿ ನಕ್ಕ !"

ಇದು ಆಹಾ ಎನ್ನಿಸುವಂತಿದೆ. Very wicked.

ಚೆ೦ಬಾರ್ಪು March 2, 2008 at 7:35 PM  

ಅವನ ಮುದಿ ಅಮ್ಮ
ಪ್ಯಾಂಟು ತೊಳೆದಾಗ ಸಿಕ್ಕ ಎರಡು ರೂಪಾಯಿ ನೋಟನ್ನು
ಬೆಳಗಿನ ಬಿಸಿಲಲಿ ಜೋಪಾನ ಒಣಗಿಸುತ್ತಿದ್ದಳು.
ಎದ್ದು ಬಂದ, ನೋಡಿ ನಕ್ಕ !

- too good.

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP