February 13, 2008

ಅಂತಃ'ಪುರ’ ಗೀತೆ

5
ಸಿಟಿ ಯಾಕೊ ಸಿಡುಕ್ಯಾಕೊ ನನ ಗಂಡ
ನೋಡಯ್ಯನಿನ್ ಮಗಳ ಮುಖದಂದ.
ಅಲ್ಲಿ ದುಡಿದದ್ದೆಲ್ಲ ಬಾಡಿಗೆ ಬದುಕಿಗೆ ದಂಡ
ಈ ತೋಟ, ತಿಥಿ ಊಟ, ಬಿಡೋದೇನೋ ಭಂಡ?
ಇಲ್ಲಿದ್ರೂ ಕುಡೀತೀಯ ಶನಿವಾರ ಹೆಂಡ !

ಗಂಗೆಯಾ ನೊರೆ ಹಾಲು, ಒಂದೆಲಗ ಸಿಹಿ ತಂಬ್ಳಿ
ಮೂಲೆ ತೋಟದ ಮಾವಿನ ಮಿಡಿ
ನೀ ನೆಟ್ಟಿರೋ ಇನ್ನೊಂದು ಕುಡಿ?!
ಮರೆವೆಯಾ ಹೃದಯದ ದೇವಾನಂದ.

ಈ ಸಾಲ ಸಾಲದೂಂತ
ಆ ನಕ್ಷತ್ರಿಕನಲ್ಲಿ ಕೇಳಬೇಡ,
ದುಡಿದರೆ ಅಲ್ಲಿ ಊಟ ಸಿಗತ್ತೆ ಹಸಿವಿರಲ್ಲ,
ಬಸ್ಸು ನೂರಿದ್ದರೂ ಸೀಟು ಸಿಗಲ್ಲ,
ಏದುಸಿರು ನಿಟ್ಟುಸಿರೂ ಸಹಜವಲ್ಲ
ಗುರುತು ನೆನಪು ಉಳಿಯದಲ್ಲಿ ಬದುಕಬೇಡ.
***
ಹೋಗೋದಿದ್ರೆ ಹೋಗು
ಹಚ್ಕೊಂಡು ಸಿಗರೇಟು
ಕೊಟ್ಟೋಗು ಪಾಪುಗೂ ಒಂದೇಟು
ಅದಾದ್ರೂ ಕೈಗೂಸು ಅಳತಿರ್ಲಿ ಅಳುವಷ್ಟು
ಕರು ಬಿಟ್ಕೊಂಡು ಬರ್‍ತೀನಿ ನಿಲ್ಲೊಂದು ತಾಸು.

ಸಿಟಿ ಯಾಕೊ ಸಿಡುಕ್ಯಾಕೊ ನನ ಗಂಡ
ನೀ ಹೋಗ್ತೀನಿ ಅಂದ್ರ...
ನನ್ ಎದೆ ಕೆಂಡ.
--------------------------
(ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಕಾಡೊಳಗಿನ ಊರೊಂದರಲ್ಲಿ ಅಡಿಕೆ ಕೃಷಿಯಲ್ಲಿ ಬದುಕುತ್ತಿದ್ದ ನಾಲ್ವರ ಮಧ್ಯಮ ವರ್ಗದ ಕುಟುಂಬ. ಮಗಳು ದೂರದ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಹೈಸ್ಕೂಲು ಓದುತ್ತಿದ್ದಳು. ಮಗನಿಗೆ ಐದಾರು ವರ್ಷ. ನಲವತ್ತರ ವಯಸ್ಸಿನ ಆ ಮನೆಯ ಯಜಮಾನ ಆರೇಳು ಕೋಣೆಗಳ ಹೊಸ ತಾರಸಿ ಮನೆ ಕಟ್ಟಿಸಿದರು. ಗೃಹಪ್ರವೇಶವಾದ ತಿಂಗಳಲ್ಲೇ ಬೆಂಗಳೂರಿಗೆ ಬಂದು ಸಣ್ಣ ಕೋಣೆ ಹಿಡಿದರು. ಯಾಕೆ ಅಂತೀರಾ? ಬೆಂಗಳೂರಲ್ಲಿ ದುಡಿದು ಸಂಪಾದಿಸಿ, ಮನೆ ಕಟ್ಟಲು ಮಾಡಿದ ಸಾಲ ತೀರಿಸಲು !
ಹಳ್ಳಿಗಳಲ್ಲಿರುವ 'ಸ್ಥಿತಿವಂತ-ಗುಣವಂತ’ ಹುಡುಗರನ್ನೂ ಧಿಕ್ಕರಿಸಿ ನಗರದಲ್ಲಿರುವ ಹುಡುಗನೇ ಆಗಬೇಕೆಂದು ಬಹುತೇಕ ಯುವತಿಯರು ಪಟ್ಟು ಹಿಡಿಯುತ್ತಿರುವ ಕಾಲದಲ್ಲಿ, ಈ ಮನೆಯ ಸ್ಥಿತಿ ಕೊಂಚ ವ್ಯತ್ಯಸ್ಥವಾಗಿದೆ ಅವರ ಪತ್ನಿ ಏನಂದರೋ ಗೊತ್ತಿಲ್ಲ. ಅಂತೂ ಈ ಪದ್ಯ ಅರ್ಧ ಹೊಸೆದಿರುವಾಗ, ಆ ಘಟನೆ ನೆನಪಾಗಿ ಬರೆದುಕೊಂಡಿದ್ದೇನೆ.)

3 comments:

Shanmukharaja M February 13, 2008 at 8:12 PM  

"ಗುರುತು ನೆನಪು ಉಳಿಯದಲ್ಲಿ ಬದುಕಬೇಡ" What a saying!! Everyone who goes to far from home (It may be to Bangalore or US by forgetting their native) needs to read these lines!! Just superb...

ತೇಜಸ್ವಿನಿ ಹೆಗಡೆ February 16, 2008 at 2:57 AM  

ನಮಸ್ಕಾರ,
"ಸಿಟ್ಟ್ ಯಾಕೆ ಸಿಡಕ ಯಾಕೆ ನನ ಜಾಣೆ" ಹಾಡನ್ನು ನೆನಪಿಸುವಂತಿದೆ. ಇನ್ನು ನೀವು ಬರೆದಿರುವಂತೆ ಈಗಿನ ಬಹುತೇಕ ಹುಡುಗಿ
ಯರ ಹಠವನ್ನು ನೋಡಿದರೆ, ಅವರು "ಹಿತ್ತಲು ಗಿಡ ಮದ್ದಲ್ಲ" ಎಂದು ಬಲವಾಗಿ ನಂಬಿರುವಂತಿದೆ.;-)

Unknown February 26, 2008 at 1:45 AM  

Liked it for its undercurrents of sadness, we live in the time which is in constant flux.

Never realised Diwakar has written that poem. It is really good one

-ashok hegde

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP