February 09, 2008

ಸಿಟಿ ಗೀತ

3

ಗಲಗಲ ಅಲುಗುತ್ತಿದೆ ಈ ನಗರ
ಬೆಳೆದು ಅಗಲಗಲ ಜಗದಗಲ.
ಇವತ್ತು ಬರ್ಲಾ, ನಾಳೆ ಆಗಲ್ಲ
ಪೈನ್‌ಕಿಲ್ಲರ್ ಮಾತ್ರೆ ತರ್ಲಾ, ಸಂಬಳ ಸಾಕಾಗಲ್ಲ
ಆ ಓನರ್ ಸರಿಯಿಲ್ಲ, ನೆಟ್ ಕನೆಕ್ಟ್ ಆ..ಗ್ತಿ..ಲ್ಲಾ..

ಅಮ್ಮ ಫೋನ್ ಮಾಡಿ ಅಂದಳು,
ಚೆನ್ನಾಗಿ ಬೆಳೆದಿದೆ ಹಾಗಲ, ಕಳಿಸಲಾ?

4
ಮೊನ್ನೆ ಬಂದವಳು ಅಂದಳು-
ಹೌದು, ಗದಗುಡುತ್ತಿದೆ ಶಹರ
ನಗ ತುಂಬಿದ ನಗರ
ತುಯ್ಯುತಿರುವ ಸಾಗರ.

ಈ ನಗರಿಗೆ ಹತ್ತಾರು ಕಂಪನಾಂಕ
ಅಂಕ, ಬಿಂಕ, ಎಲ್ಲದಕ್ಕೂ ಸುಂಕ
ಇಲ್ಯಾಕೆ ಊದ್ತೀಯೋ ಶಂಖ?

ನಾನಂದೆ-
ಇದೋ ಮೂಗು ಹಿಡಿದೆ ಅಮ್ಮಾ, ಕಣ್ಮುಚ್ಚು
ಈ ನಗರವ ಕೊಂಚ ಕಲಕಿಸಿದೆ
ಕುಡಿದುಬಿಡು.
----------------------
('ಪೇಟೆಯ ಪಾಡ್ದನ’ವನ್ನು ಪ್ರಕಟಿಸಿದ ಅವಧಿ ಮತ್ತು ದಟ್ಸ್‌ಕನ್ನಡ ಜಾಲತಾಣಗಳಿಗೆ ಕೃತಜ್ಞತೆಗಳು. ಲೋಗೊ ಕೃಪೆ-ಅಪಾರ)

4 comments:

Anonymous,  February 12, 2008 at 1:36 AM  

ಸ್ವಾಮಿ ಸುಧನ್ವಾರೇ,
ಸಿಟಿ ಗೀತ ಮತ್ತು ಪೇಟೆಯ ಪಾಡ್ದನ ಚೆನ್ನಾಗಿದೆ. ಹಾಗೆಯೇ ಅದನ್ನು ಮೂಗು ಮುಚ್ಚಿಕೊಂಡು ಕುಡಿಯುವುದಿರಲಿ, ನುಂಗಿ ಬಿಡಬೇಕು, ಇಲ್ಲದಿದ್ದರೆ ನಗರ ನಮ್ಮನ್ನೇ ನುಂಗಿ ಬಿಡುತ್ತೆ, ಹುಷಾರ್.
ನಾವಡ

Anonymous,  February 13, 2008 at 2:01 AM  

ಸುಧನ್ವ,
ಪಾಡ್ದನಗಳನ್ನ ಬಹಳ ಎಂಜಾಯ್ ಮಾಡುತ್ತಿದೇನೆ. ಇದನ್ನ ನೀವೆ ಓದಿದರೆ ಹೇಗಿರುತ್ತೆ ಅಂದುಕೊಂಡೆ. ಇದರ ಆಡಿಯೊವನ್ನ ನೀವೇಕೆ ಅಪ್ ಲೋಡ್ ಮಾಡಬಾರದು? ಇದು ಓದಲಿಕ್ಕೆ ಮಾತ್ರವಲ್ಲ ಕೇಳಲಿಕ್ಕು ಲಾಯಕ್ಕಾದಂಥದು.
-ಟೀನಾ

shashanka February 14, 2008 at 10:19 AM  

ಅಂಕ ಸುಂಕ ಕಂಪನಾಂಕ ..... ಅಳುಗಿಸಿತೆ ಕೊಂಚ?
ಕುಡಿಯೋದಂತು ಸೂಪರ್ :) ಶಹರೆತಿ ಜೀರ್ನೋಭವ
~ ಶಶಾಂಕ ಅರ್ನಾಡಿ

Sree February 22, 2008 at 2:36 AM  

ಸಖತ್ತಾಗಿದೆ,ನಗಿಸ್ತಾನೇ ಎಲ್ಲೋ ಒಂದು ಸಣ್ಣ ವಿಷಾದ ಬೆರೆಸಿಬಿಡತ್ತೆ... ಕಲಕಿಸಿ ಕುಡಿಯೋ ರೂಪಕ ಅಂತೂ ಅದ್ಭುತ!

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP