August 30, 2007

' ಕೆಂಡ ಸಂಪಿಗೆ ' - ಬೆಸ್ಟ್ ಅಂಡ್ ವರ್ಸ್ಟ್ ಸಂಗತಿಗಳಿಗಾಗಿ ಒಂದು ಅಂಕಣ

'ಧಾರೇಶ್ವರರು ಹಾಡಿದರೆಂದರೆ ಕಲಿಯುಗ ದ್ವಾಪರವಾಗುವುದೆ...?!'

ಸದಭಿರುಚಿಯ ಕೆಲಸಗಳಿಗೆ 'ಜನ ಬರಲ್ಲ, ನೋಡಲ್ಲ, ಓದಲ್ಲ ಇತ್ಯಾದಿ'- ಕಾರಣಗಳನ್ನಿಟ್ಟುಕೊಂಡು ಕೀಳುದರ್ಜೆಯದ್ದನ್ನು ಮಾಡಿದಂತೆಯೇ, 'ಜನ ಬರ್‍ತಾರೆ, ನೋಡ್ತಾರೆ, ಓದ್ತಾರೆ' ಅಂತಲೂ ಬೇಕಾಬಿಟ್ಟಿಯಾಗಿ ಕೆಲವರು ವರ್ತಿಸುತ್ತಿರುತ್ತಾರೆ !

ಪೆರ್ಡೂರು ಮೇಳದ 'ಗಾಯಕ' ಧಾರೇಶ್ವರರ ಗಾಯನವನ್ನು ಕೇಳುವ ಅವಕಾಶ ಇತ್ತೀಚೆಗೆ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನನ್ನ ಪಾಲಿಗೆ ಅಟ್ಟಿಸಿಕೊಂಡು ಬಂತು. ಉತ್ತರನ ಪೌರುಷ-ಲಂಕಾ ದಹನ-ಶ್ರೀಕೃಷ್ಣ ಗಾರುಡಿ ಪ್ರಸಂಗಗಳು. ರಮೇಶ್ ಬೇಗಾರ್ ಸಂಯೋಜನೆ. ಪೌರಾಣಿಕ ಹಿನ್ನೆಲೆಯ ಪ್ರಸಂಗಗಳು ಅನ್ನುವುದನ್ನು ಬಿಟ್ಟರೆ ಪ್ರದರ್ಶನದಲ್ಲಿ ಒಂಚೂರೂ ಪೌರಾಣಿಕ ಕಳೆ ಕಾಣದ್ದು ನಮ್ಮ ಕಣ್ಣಿನ ದೋಷವೇ ಇರಬೇಕು ! ಮೊದಲಬಾರಿಗೆ ಉತ್ತರನ ಪಾತ್ರ ವಹಿಸಿದ ಹಾಸ್ಯ ಕಲಾವಿದ ರಮೇಶ್ ಭಂಡಾರಿ, ಭಂಡು ಮಾತುಗಳನ್ನು ಇನ್ನಷ್ಟು ಕಲಿಯಬೇಕು. 'ನಮ್ಮ ಮಾವ ಕೀಚಕ ಸತ್ತದ್ದು ಯಾಕೆ ? ಅಳಿಯ ತಯಾರಾಗಿದ್ದಾನೆ ಅಂತ..!' ಎಂಬ ಒಂದು ಮಾತು ಫಸ್ಟ್‌ಕ್ಲಾಸ್. ಕಣ್ಣಿಮನೆಯ ಶೃಂಗಾರ ರಾವಣ, ಥಂಡಿಮನೆಯ ಹನುಮಂತನೂ ಅಷ್ಟಕ್ಕಷ್ಟೆ. ರಂಗಗೀತೆ, ಭಜನೆ, ಸುಗಮ ಸಂಗೀತದ ಶೈಲಿಯನ್ನು ಕಲಕಿಕೊಂಡು ಹಾಡುವ ಧಾರೇಶ್ವರರ ಬಗ್ಗೆ ಮಾತ್ರ ಯಕ್ಷಗಾನ ಪ್ರಿಯರು ಇನ್ನೂ ಚಪ್ಪಾಳೆ ತಟ್ಟಿ ಧಾರಾಳತನ ತೋರುತ್ತಿರುವುದು ವಿಚಿತ್ರ. ಯಾವುದೇ ಕಲೆಯ ಶ್ರೇಷ್ಠತೆ ಅಡಗಿರುವುದು ತನ್ನ ಅನನ್ಯತೆಯನ್ನು ತೋರಿಸಿಕೊಳ್ಳುವುದರಲ್ಲಿಯೇ ಹೊರತು ಇನ್ನೊಂದನ್ನು ನಕಲು ಮಾಡುವುದರಲ್ಲಲ್ಲ. ಪ್ರಯೋಗ ಮಾಡುವುದೇ ಉದ್ದೇಶವಾಗಿದ್ದರೆ 'ಯಕ್ಷಗಾನ' ಎಂಬ ಬ್ಯಾನರ್ ತೆಗೆದು, ಹೊಸ ಫಲಕದಡಿ ಈ ಮಿಶ್ರಗಾಯನ ಪ್ರಯೋಗಗಳನ್ನು ಮುಂದುವರಿಸಬಹುದು ಎಂಬುದು ನಮ್ಮ ಸೂಚನೆ. ಸುರೇಶ್ ಶೆಟ್ಟಿಯವರಾದರೆ ಭಾಗವತಿಕೆ ಮಾಡಲು ಯತ್ನಿಸುತ್ತಿದ್ದಾರೆ ಅನ್ನಬಹುದು.

ಕೊನೆಗೆ ಸಂಘಟಕರು ಘೋಷಿಸಿದ್ದು: 'ಮುಂದಿನ ವಾರ ಯುವ ಗಾಯಕನೊಬ್ಬನ (ಹೆಸರು ಮರೆತೆ) ಸುಗಮಸಂಗೀತ ಹಾಗೂ ಯಕ್ಷಗಾನ ಶೈಲಿಯಲ್ಲಿ ಧಾರೇಶ್ವರರ ಹಾಡುಗಾರಿಕೆಯ ಜುಗಲ್‌ಬಂದಿ ಏರ್ಪಡಿಸಲಾಗಿದೆ !' ಧಾರೇಶ್ವರರ ಧಾರಾಕಾರ ಸ್ವರಧಾರೆಗೆ ಕಿವಿಗೊಡುವವರಿಗೆ ಶರಣು !

----------------------------------------------------------------------------ಪ್ರಸನ್ನರ ಸರಳ ಪಾಠ


ಸುಮಾರು ಮೂವತ್ತು ವರ್ಷಗಳಿಂದ ರಂಗಭೂಮಿಯಲ್ಲಿರುವ ಪ್ರಸನ್ನ ಕಳೆದ ವರ್ಷ 'ದೇಸಿ ಜೀವನ ಪದ್ಧತಿ' ಎಂಬ ಪುಸ್ತಕ ಬರೆದಿದ್ದರು. ವ್ಯಕ್ತಿತ್ವ ವಿಕಸನ, ಆಧ್ಯಾತ್ಮ, ಧ್ಯಾನ, ಸುಮ್ಮನೆ ಇರುವುದು ಇತ್ಯಾದಿಯನ್ನು ಕೊಂಚ ಅದಲುಬದಲು ಮಾಡಿ ಉಣಬಡಿಸುತ್ತಲೇ ಇರುವ ಗುರುಗಡಣದ ಮಾತು ಕೇಳುವ ಜತೆಗೆ ನಾವೊಮ್ಮೆ ಪ್ರಸನ್ನರ ಪುಸ್ತಕ ಓದಬೇಕು.ಸರಳ ಕನ್ನಡದಲ್ಲಿ ಸ್ಪಷ್ಟವಾಗಿ , ನಿಖರವಾಗಿ ಬರೆಯುವ ಪ್ರಸನ್ನ , ಈಗ 'ನಟನೆಯ ಪಾಠಗಳು' ಎಂಬ ಹೊಸ ಪುಸ್ತಕ ತಂದಿದ್ದಾರೆ. (ಕರ್ನಾಟಕ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ೩೫೦ ಪುಟಗಳ ಪುಸ್ತಕದ ಬೆಲೆ ರೂ. ೧೫೦) ಹವ್ಯಾಸಿ ನಟರು, ವೃತ್ತಿಪರ ನಟರು, ಟೆಲಿವಿಷನ್ ಹಾಗೂ ಸಿನಿಮಾ ನಟರು, ನಟರಲ್ಲದಿದ್ದರೂ ಸಂವಹನ ತರಬೇತಿಯನ್ನು ಬಯಸುವ ಎಲ್ಲರಿಗೆ ನಟನೆಯ ಕೈಪಿಡಿಯಿದು ಅಂತ ಹೇಳಿಕೊಂಡಿದ್ದಾರೆ. (ಅಂದರೆ ಯಾವುದೇ ರೀತಿಯ ಸಂವಹನಕ್ಕೆ ನಟನೆ ಅಗತ್ಯ ಅಂತ ಹೇಳುತ್ತಿದ್ದಾರೆ ! ಅವರೇ ಬರೆದಂತೆ 'ಸುಳ್ಳು ಥಟ್ಟನೆ ತಿಳಿದುಬಿಡುತ್ತದೆ, ಆದರೆ ಸತ್ಯ ಥಟ್ಟನೆ ತಿಳಿಯುವುದಿಲ್ಲ ! ')ಕನ್ನಡದಲ್ಲಿ ಇಂತಹ ಪುಸ್ತಕ ಬಂದಿರುವುದು ಇದೇ ಮೊದಲು. ನಾಟಕದ ಫೋಟೊ-ಚಿತ್ರ ಸಹಿತವಾದ ಈ ಪುಸ್ತಕ ನಟನೆಯ ಮೂಲ ಪಾಠಗಳನ್ನು ಅತ್ಯಂತ ಪ್ರಾಕ್ಟಿಕಲ್ ಆಗಿ ಹೇಳುತ್ತದೆ. ರೂಪಕ-ಉಪಮೆಗಳಿಂದ ಕಿಕ್ಕಿರಿದು, ತೀರಾ ರಮ್ಯವಾಗಿ, ಕೊಂಚ ಗೊಂದಲಕ್ಕೆ ದೂಡಿ ಬರೆಯುವುದನ್ನೇ ಅಭ್ಯಾಸ ಮಾಡಿಕೊಂಡವರು ಸರಳವಾಗಿದ್ದೂ ಓದಿಸಿಕೊಂಡು ಹೋಗುವ ಈ ಎರಡು ಪುಸ್ತಕಗಳನ್ನು ಪರಾಂಬರಿಸಬೇಕು. ( ಉದಯವಾಣಿ ಅಂಕಣಕಾರರಾದ ಅಬ್ದುಲ್ ರಶೀದ್, ಶ್ರೀಧರ ಬಳಗಾರರು -ಅತಿರಮ್ಯತೆ ಬಿಟ್ಟು ಕೊಂಚ ರಿಲಾಕ್ಸ್ ಆಗಬೇಕೆಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇವೆ ! ) 'ಸತ್ಯ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸ ಅರಿಯುವ ಪ್ರಯತ್ನ ಮಾಡುತ್ತದೆ ರಂಗಭೂಮಿ' ಎನ್ನುತ್ತಾರೆ ಪ್ರಸನ್ನ. ಬಹುಶಃ ಇದು ಎಲ್ಲ ಕಲೆಗಳ ಸಂದರ್ಭದಲ್ಲೂ ನಿಜವಿರಬೇಕು. ನಟನೆ ಮಾಡುವುದರಲ್ಲಿ ಅಥವಾ ನೋಡುವುದರಲ್ಲಿ ಆಸಕ್ತಿ ಇದ್ದರೆ ನಟನೆಯ ಪಾಠಗಳು' ಓದಿ.

9 comments:

Anonymous,  October 22, 2007 at 1:39 PM  

thanks for your write-up on Dhareshwara. i really do not understand why we still call him a bhagavatha

Anonymous,  October 25, 2007 at 4:12 AM  

ಒಳ್ಳೆಯ ವಿಮರ್ಶೆ..
ಆದರೆ ಯಕ್ಷ-ಸಿನೆಗಾನ ಗಳು ಜನಪ್ರಿಯವಾಗುತ್ತಿರುವ ಈ ದಿನಗಳಲ್ಲಿ ಇದೆಲ್ಲ ಯಾರಿ೦ದ ಆಗುತ್ತಿರುವ ತಪ್ಪು ಅ೦ತ ಗೊತ್ತಾಗುತ್ತ ಇಲ್ಲ.. ಮೇಳದ ಯಜಮನರು, 'ಸೂಪರ್ ಸ್ಟಾರ್' ಪ್ರಸ೦ಗಕರ್ತರು, 'ರಿಮಿಕ್ಸ್' ಗೆ ಚಪ್ಪಾಳೆ ತಟ್ಟುವ ಪ್ರೇಕ್ಷಕರು- ಎಲ್ಲಾರೂ ಯಕ್ಷಗಾನವನ್ನು ಕುಲಗೆಡಿಸಲು ತಮ್ಮ ತಮ್ಮ ಕೊಡುಗೆ ನೀಡುತ್ತಿದ್ದಾರೆ ಎ೦ದು ಅನಿಸುತ್ತದೆ..

v.v. November 27, 2007 at 3:28 AM  
This comment has been removed by the author.
v.v. November 27, 2007 at 3:29 AM  

ನಮಸ್ಕಾರ.

"ರೂಪಕ-ಉಪಮೆಗಳಿಂದ ಕಿಕ್ಕಿರಿದು, ತೀರಾ ರಮ್ಯವಾಗಿ, ಕೊಂಚ ಗೊಂದಲಕ್ಕೆ ದೂಡಿ ಬರೆಯುವುದನ್ನೇ ಅಭ್ಯಾಸ ಮಾಡಿಕೊಂಡವರು ಸರಳವಾಗಿದ್ದೂ ಓದಿಸಿಕೊಂಡು ಹೋಗುವ ಈ ಎರಡು ಪುಸ್ತಕಗಳನ್ನು ಪರಾಂಬರಿಸಬೇಕು" ಎನ್ನುವ ನಿಮ್ಮ ಮನವಿಗೆ ನನ್ನ ಸಂಪೂರ್ಣ ಬೆಂಬಲ ಇದೆ.

ವಂದನೆಗಳೊಂದಿಗೆ,
ಶೇಷಾದ್ರಿ

Anonymous,  February 26, 2008 at 7:41 AM  

I appreciate Sudhanwa's sincerity for accepting that there is a problem in his eyes (namma kannina dosha). If one views Badagu yakshagana by wearing Tenku glass, it may not look like a yakshagana for them. If yakshagna is singing(screaming) by bhagavatas, senseless movement of legs, random movement of hands with no expression on the face as in Tenku tittu yakshagana - I would not hesitate to call current badagu tittu yakshagana with some other name and watch it. What is in the name? as long as there is melody, meaning, expression (which one can find only in badagu tittu) and as long as I can enjoy that , who cares?

Anonymous,  February 26, 2008 at 7:59 AM  

I guess Sudhanwa had seen some other art form in the name of yakshagana or he has misconceptions about yakshagana. I had been to this particular show and it was a pure pauranika yakshgana show only with some very nice performance. I don't know whether current form of bhaavagite, bhajane has changed to yakshagana style since Dhareshwara's songs on that day was in pure yakshagana style only!!!!!

Unknown April 5, 2008 at 10:36 PM  

ತೆಂಕಿನ ಭಾಗವತರ ದೌರ್ಬಲ್ಯವನ್ನೇ ಭಾಗವತಿಕೆಯ ಪರಂಪರೆ ಎಂಡು ತಿಳಿದುಕೊಂಡಿರುವ ಸುಧನ್ವರ ಅಜ್ನಾನಕ್ಕೆ ಶರಣು. ವರ್ಶಕ್ಕೊಂದು ಬಾರಿ ಥಟ್ಟನೆ ನೆನಪಾದವರಂತೆ ಮುಂಡಾಸು ಕಟ್ಟಿಕೊಳ್ಳುವ, ವಿನಾಕಾರಣ ವಿಕಾರವಾಗಿ ಕಿರಿಚಿಕೊಳ್ಳುವ ಪದ್ಯಾಣರ ಭಾಗವತಿಕೆಗೆ ಸುದನ್ವರು ಚಪ್ಪಳೆ ತಟ್ಟುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂಬುದು ನಮ್ಮ ಸೂಚನೆ.

prashanth August 10, 2009 at 4:44 AM  

hi sudhanva....
i really appritiate your frank comments...!!
There is no point in involving in the discussion with Anu,Rajarama,Krishna since they r the bliend followers of dhareshwara (it will be like "konana munde kinnari barisida hage...").
If a donkey screams by wearing dhareshwara's mask, these people say "dhareshwara yen mast hadidru...!! "
A person becomes really great when he truely points the mistakes of a great artist (when he commits)without accepting inspite of being a fan of him.
Even I truely agree that padyana's singing quality was really great in the past. But, now it's drastically went down. Frankly, it's time for padyana to have a look at his past and learn. Otherwise, finally, he'l be having only dumb and deff fans like Anu,Rajarama,Krishna....who knows only clapping...:)
Even though I like padyana, I truely accept since its a truth.

they just told holla signs like kalinga navada...thank god..they didnt say holla himself navada...!!

y do u simply waste ur time in justifyng ur words to the people who can't make out the difference b/w tenku and badagu.....!!

bhagavat could be any one (fresher or experience)...point him properly if he does any mistake and prritiate if he does good.

Ragu Kattinakere July 18, 2010 at 7:56 PM  

ದೇರಾಜೆಯವರೇ, ಯಾವುದೇ ಜವಾಬ್ದಾರಿಯುತ ಟೀಕೆಯ ಗುಣಲಕ್ಷಣಗಳಲ್ಲಿ, ಕೆಟ್ಟದ್ದರಲ್ಲಿ ಒಳಿತನ್ನ ಕಾಣುವುದೂ ಒ೦ದು. ಧಾರೇಶ್ವರರು, ಸಾ೦ಪ್ರದಾಯಿಕ ಎ೦ದು ಹಲವರು ಕರೆಯು ಶೈಲಿಯಲ್ಲಿ, ಹಾಡಬಲ್ಲರು ಎನ್ನುವುದು ಅವರ ಧ್ವನಿಮುದ್ರಿಕೆಗಳಿ೦ದ ತಿಳಿದಿದ್ದರೂ ಅವರಮೇಲೆ ಇಷ್ಟು ನಿಷ್ಕರುಣಿಯಾಗುವುದು ನ್ಯಾಯವಲ್ಲ ಎ೦ದೆನಿಸುತ್ತದೆ. ನಿಮಗಾದ ನಿರಾಸೆಯನ್ನು ನಾನೂ ಒಬ್ಬ ಯಕ್ಷಗಾನದ ಅಭಿಮಾನಿಯೂ ಸಹೃದಯನೂ ಆಗಿ ಹ೦ಚಿಕೊಳ್ಳುತ್ತೇನೆ. ಆದರೆ ಧಾರೇಶ್ವರರಿಗೆ ಅನುಮಾನದ ಅವಕಾಶವನ್ನಾದರೂ(benefit of doubt) ನಾವು ಕೊಡಬೇಕು. ಸಾ೦ಪ್ರದಾಯಿಕವಾಗಿ ಅವರು ಹಾಡಬಲ್ಲರು, ಹಾಡಿದ್ದಾರೆ. ಆದರೆ ಅವರ ಕೊಡುಗೆಗಳನ್ನೆಲ್ಲ ಅವಗಣಿಸಿ, ಅವರ ಸುಧೀರ್ಘ ಭಾಗವತಿಕೆಯ ಸೇವೆಯನ್ನೇ ಮರೆತು ಕಟುಕ ಮನಸ್ಸಿನಿ೦ದ ಕುಟುಕಿದರೆ, ನಾವು ಕೃತಘ್ನರೆನಿಸುವುದಿಲ್ಲವೇ?

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP